ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲ್ವೆ: ಎರಡು ವರ್ಷಗಳಲ್ಲಿ 10,000 ಕೋಚ್‌ಗಳ ನಿರ್ಮಾಣ

Published 4 ಜುಲೈ 2024, 15:46 IST
Last Updated 4 ಜುಲೈ 2024, 15:46 IST
ಅಕ್ಷರ ಗಾತ್ರ

ನವದೆಹಲಿ: ಜನಸಂದಣಿ ಕಡಿಮೆಗೊಳಿಸಲು ಮತ್ತು ಹೊಸ ಕೋಚ್‌ಗಳ ಬೇಡಿಕೆಯನ್ನು ಪೂರೈಸಲು ಭಾರತೀಯ ರೈಲ್ವೆಯು ಎರಡು ವರ್ಷಗಳಲ್ಲಿ ಸುಮಾರು 10,000 ‘ನಾನ್‌–ಎಸಿ’ ಕೋಚ್‌ಗಳನ್ನು ನಿರ್ಮಿಸಲು ಅನುಮತಿಸಿದೆ.

ಈ ಪೈಕಿ 4,485 ಕೋಚ್‌ಗಳು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಾಗೂ 5,444 ಕೋಚ್‌ಗಳು ಮುಂದಿನ ಆರ್ಥಿಕ ವರ್ಷದಲ್ಲಿ ನಿರ್ಮಾಣವಾಗಲಿವೆ.

ಈ ಕೋಚ್‌ಗಳನ್ನು ಎಕ್ಸ್‌ಪ್ರೆಸ್‌ ಮತ್ತು ದೂರ ಪ್ರಯಾಣದ ರೈಲುಗಳಲ್ಲಿ ಸಾಮಾನ್ಯ ಬೋಗಿ ಮತ್ತು ಸೆಕೆಂಡ್‌ ಕ್ಲಾಸ್‌ ಸ್ಲೀಪರ್ ಕೋಚ್‌ಗಳಾಗಿ ಬಳಸಲು ರೈಲ್ವೆ ಯೋಜಿಸಿದೆ.

ಇವುಗಳನ್ನು ಚೆನ್ನೈನ ‘ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ’, ಕಪುರ್ತಲಾದ ‘ರೈಲ್‌ ಕೋಚ್‌ ಫ್ಯಾಕ್ಟರಿ’, ರಾಯಬರೇಲಿಯ ‘ಮಾಡರ್ನ್‌ ಕೋಚ್‌ ಪ್ಯಾಕ್ಟರಿ’ಯಲ್ಲಿ ನಿರ್ಮಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಮೃತ್‌ ಭಾರತ್‌ ರೈಲುಗಳ ನಿರ್ಮಾಣವನ್ನು ಹೆಚ್ಚಿಸಲು ರೈಲ್ವೆ ನಿರ್ಧರಿಸಿದೆ. ಇದು ಹೆಚ್ಚಿನ ದೂರದ ಪ್ರಯಾಣಕ್ಕಾಗಿ ಆಧುನಿಕ ಸೌಲಭ್ಯಗಳೊಂದಿಗೆ ‘ನಾನ್‌– ಎ.ಸಿ’  ಕೋಚ್‌ಗಳನ್ನು ಒಳಗೊಂಡಿರುತ್ತದೆ.

ವಂದೇ ಭಾರತ್‌ ಸ್ಲೀಪರ್‌ ರೈಲುಗಳು ಸಂಚಾರಕ್ಕೆ ಸಿದ್ಧವಾಗಿದ್ದು, ಬೆಂಗಳೂರು, ಗೋವಾ, ಮುಂಬೈ, ಕೋಲ್ಕತ್ತ ಮತ್ತಿತರ ನಗರಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 10 ಮಾರ್ಗಗಳಲ್ಲಿ ನೂತನ ಮಾದರಿಯ ರೈಲುಗಳ ಸಂಚಾರವನ್ನು ಆರಂಭಿಸಲು ಭಾರತೀಯ ರೈಲ್ವೆ ಕಾರ್ಯನಿರತವಾಗಿದೆ.

ವಂದೇ ಭಾರತ್‌ ಸ್ಲೀಪರ್‌ ಪ್ರೊಟೊಟೈಪ್‌ 16 ಕೋಚ್‌ಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಎಸಿ 3 ಟೈಯರ್‌ನ 11 ಕೋಚ್‌ಗಳು, ಎಸಿ 2 ಟೈಯರ್‌ನ ನಾಲ್ಕು ಕೋಚ್‌ಗಳು ಹಾಗೂ ಮೊದಲ ದರ್ಜೆಯ 1 ಎಸಿ ಕೋಚ್‌ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT