ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರ: ಫೆ.21ಕ್ಕೆ ರಾಷ್ಟ್ರ ರಾಜಧಾನಿವರೆಗೆ ಟ್ರ್ಯಾಕ್ಟರ್‌ ರ‍್ಯಾಲಿಗೆ ಕರೆ

Published 13 ಫೆಬ್ರುವರಿ 2024, 15:34 IST
Last Updated 13 ಫೆಬ್ರುವರಿ 2024, 15:34 IST
ಅಕ್ಷರ ಗಾತ್ರ

ಜೈಪುರ: ‘ದೆಹಲಿ ಚಲೋ’ ಪ್ರತಿಭಟನೆಗೆ ರಾಜಸ್ಥಾನದ ರೈತರು ಬೆಂಬಲ ನೀಡಿದ್ದಾರೆ. ಜೊತೆಗೆ ಫೆ.21ರಂದು ರಾಷ್ಟ್ರ ರಾಜಧಾನಿವರೆಗೆ ‘ಟ್ರ್ಯಾಕ್ಟರ್‌ ರ‍್ಯಾಲಿ’ ನಡೆಸಲು ಯೋಜನೆ ರೂಪಿಸಿದ್ದಾರೆ.

ಫೆ.21ರಂದು ರೈತರೆಲ್ಲಾ ಜೈಪುರದಲ್ಲಿ ಒಂದುಗೂಡಿ ದೆಹಲಿವರೆಗೆ ರ‍್ಯಾಲಿ ನಡೆಸಲಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಜಾರಿ ಮಾಡಬೇಕೆಂದು ಆಗ್ರಹಿಸುವ ಪ್ರತಿಭಟನೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳೂ ಭಾಗಿಯಾಗಬೇಕು ಎಂದು ರೈತರು ಮನವಿ ಮಾಡಿದ್ದಾರೆ.

‘ದೆಹಲಿ ಚಲೋ’ದಲ್ಲಿ ಭಾಗಿಯಾಗಲು ಹನುಮಗಢ ಮತ್ತು ಶ್ರೀಗಂಗಾನಗರ ಜಿಲ್ಲೆಯ ರೈತರು ದೆಹಲಿಗೆ ಆಗಮಿಸುತ್ತಿದ್ದಾರೆ’ ಎಂದು ಕಿಸಾನ್‌ ಮಹಾಪಂಚಾಯತ್‌ ರಾಷ್ಟ್ರೀಯ ಅಧ್ಯಕ್ಷ ರಾಂಪಾಲ್‌ ಜಾಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತರು ಅತ್ಯಂತ ಅಪಾಯಕಾರಿ ಶತ್ರುಗಳು ಎಂಬಂತೆ ಕೇಂದ್ರ ಸರ್ಕಾರವು ರೈತರ ವಿರುದ್ಧ ಯುದ್ಧ ಸಾರಿದೆ. ನಾವು ಬೆಳೆದ ಬೆಳೆಗೆ ಎಂಎಸ್‌ಪಿ ಕೇಳುತ್ತಿದ್ದೇವೆ. ಈ ಕುರಿತಂತೆ ರಚನೆಯಾದ ಸಮಿತಿಯು ಸರಿಯಾಗಿ ಕೆಲಸ ಮಾಡಿಲ್ಲ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ಇಷ್ಟೊಂದು ವಿಳಂಬ ಏಕೆ?  ಬೆವರು ಹರಿಸಿ ಬೆಳೆದ ಬೆಳೆಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುವ ಮೂಲಕ ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT