ಜೈಪುರ: ಕಳ್ಳತನ ಮಾಡಲು ಮನೆಯೊಳಗೆ ನುಗ್ಗಿದ್ದ ಕಳ್ಳನೊಬ್ಬ ಅಡುಗೆ ಕೋಣೆಯ ಎಕ್ಸಾಸ್ಟ್ ಫ್ಯಾನ್ನ ರಂಧ್ರದಲ್ಲಿ ಸಿಲುಕಿಕೊಂಡು ಒಂದು ಗಂಟೆ ಕಾಲ ಅಸಹಾಯಕನಾಗಿ ನೇತಾಡುತ್ತಿದ್ದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ಜನವರಿ 3ರಂದು ಮನೆ ಮಾಲೀಕ ಸುಭಾಷ್ ಕುಮಾರ್ ರಾವುತ್ ಅವರು ಕುಟುಂಬಸ್ಥರೊಂದಿಗೆ ಖತುಶ್ಯಾಮ್ಜಿ ದೇವಸ್ಥಾನಕ್ಕೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತ ಕಳ್ಳರು ದರೋಡೆ ಮಾಡಲೆಂದು ಮನೆಯೊಳಗೆ ನುಗ್ಗಿದ್ದರು.

ಮರುದಿನ ಸುಭಾಷ್ ಕುಟುಂಬಸ್ಥರು ಮನೆಗೆ ಬಂದಾಗ ಕಳ್ಳನೊಬ್ಬ ಮನೆಯಿಂದ ಹೊರಬರಲಾಗದೆ ಅಡುಗೆ ಕೋಣೆಯ ಎಕ್ಸಾಸ್ಟ್ ಫ್ಯಾನ್ನ ರಂಧ್ರದಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದ್ದ ದೃಶ್ಯ ಕಂಡುಬಂದಿದೆ. ಕೂಡಲೇ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಕಳ್ಳನ ದೇಹದ ಒಂದು ಭಾಗ ಮನೆಯೊಳಗೆ ಉಳಿದ ಭಾಗ ಹೊರಗೆ ಇರುವುದು ಕಂಡು ಸುಭಾಷ್ ಪತ್ನಿ ಬೆಚ್ಚಿಬಿದ್ದಿದ್ದರು.

ಕಳ್ಳತನ ಮಾಡುವ ಉದ್ದೇಶದಿಂದ ಆರೋಪಿಗಳು ಮನೆಯೊಳಗೆ ಪ್ರವೇಶಿಸಿದ್ದರು. ಆದರೆ, ಆರೋಪಿಯೊಬ್ಬ ಮನೆಯಿಂದ ಹೊರಬರಲಾಗದೆ ಎಕ್ಸಾಸ್ಟ್ ಫ್ಯಾನ್ನ ರಂಧ್ರದಲ್ಲಿ ಸಿಲುಕಿಕೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಕಳ್ಳರು ಅನುಮಾನ ಬರದಂತೆ ಪೊಲೀಸ್ ಸ್ಟಿಕ್ಕರ್ ಹೊಂದಿರುವ ಕಾರಿನ್ನು ಬಳಸಿದ್ದಾರೆ. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಪರಾರಿಯಾಗಿರುವ ಸಹಚರರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.