ಕೋಲ್ಕತ್ತ: ಗಲಭೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವಚುನಾವಣಾ ಆಯೋಗವು ಕೂಚ್ ಬೆಹರ್ ಜಿಲ್ಲೆಗೆ ಮುಂಬರುವ 72 ಗಂಟೆಗಳ ವರೆಗೆ ರಾಜಕಾರಣಿಗಳು ಭೇಟಿ ನೀಡದಂತೆ ಆದೇಶಿಸಿದೆ. ಈ ಸಂಬಂಧ ಆಯೋಗದ ವಿರುದ್ಧ ಕಿಡಿ ಕಾರಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ʼಮೋದಿ ನೀತಿ ಸಂಹಿತೆʼ ಎಂದು ಬದಲಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಯೋಗದ ಕ್ರಮದ ವಿರುದ್ಧ ಟ್ವಿಟರ್‌ನಲ್ಲಿ ಗುಡುಗಿರುವ ಮಮತಾ,ʼಚುನಾವಣಾ ಆಯೋಗವುಎಂಸಿಸಿ ಅನ್ನು ಮೋದಿ ನೀತಿ ಸಂಹಿತೆ ಎಂದು ಮರುನಾಮಕರಣ ಮಾಡಬೇಕು.ಬಿಜೆಪಿ ತನ್ನ ಎಲ್ಲ ಶಕ್ತಿಯನ್ನು ಬಳಸಿಕೊಳ್ಳಲಿ. ಆದರೆ,ನನ್ನ ಜನರೊಂದಿಗೆ ಬೆರೆಯುವುದಕ್ಕೆ ಮತ್ತು ಅವರ ನೋವುಗಳನ್ನುಆಲಿಸುವುದಕ್ಕೆಈ ಜಗತ್ತಿನಲ್ಲಿ ಯಾವುದೇ ಶಕ್ತಿಗೂ ನನ್ನನ್ನು ತಡೆಯಲು ಸಾಧ್ಯವಿಲ್ಲ. ಅವರುಕೂಚ್ಬೆಹರ್‌ನಲ್ಲಿರುವ ನನ್ನ ಸಹೋದರ, ಸಹೋದರಿಯರನ್ನು 3 ದಿನಗಳ ಕಾಲ ಭೇಟಿ ಮಾಡದಂತೆ ನಿರ್ಬಂಧಿಸಬಹುದು. ಆದರೆ, ನಾಲ್ಕನೇ ದಿನ ನಾನು ಅಲ್ಲಿರುತ್ತೇನೆ!ʼ ಎಂದು ತಿಳಿಸಿದ್ದಾರೆ.

ಕೂಚ್ ಬೆಹರ್‌ನಲ್ಲಿ ಭಾನುವಾರ ಪ್ರತಿಭಟನಾ ರ‍್ಯಾಲಿ ನಡೆಸುವುದಾಗಿ ಮತ್ತು ಮೃತಪಟ್ಟವರ ಮನೆಗಳಿಗೆ ಭೇಟಿ ನೀಡುವುದಾಗಿ ಮಮತಾ ಘೋಷಿಸಿದ್ದರು.

ಆದರೆ, ಚುನಾವಣಾ ಆಯೋಗವು ಯಾವುದೇ ಪಕ್ಷಕ್ಕೆ ಸೇರಿದ ರಾಜಕಾರಣಿಗಳು ಕೂಚ್ ಬೆಹರ್ ಜಿಲ್ಲೆಗೆ ಮುಂದಿನ 72 ಗಂಟೆಗಳ ವರೆಗೆ ಭೇಟಿ ನೀಡಬಾರದು ಎಂದು ಶನಿವಾರ ನಿರ್ದೇಶನ ನೀಡಿತ್ತು. ಶನಿವಾರ ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ ನಡೆದಿತ್ತು. ಈ ವೇಳೆ ಜಿಲ್ಲೆಯ ಸೀತಾಲಕುಚ್ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಡೆದ ಗಲಭೆಯಲ್ಲಿ ನಾಲ್ವರು ಮೃತಪಟ್ಟಿದ್ದರು.

ಕಳೆದತಿಂಗಳು ಟಿಎಂಸಿ ಸೇರಿರುವ ಯಶವಂತ ಸಿನ್ಹಾ ಅವರೂಚುನಾವಣಾ ಆಯೋಗದ ಕ್ರಮವನ್ನು ವಿರೋಧಿಸಿಟ್ವೀಟ್ ಮಾಡಿದ್ದಾರೆ. 'ಮಮತಾ ಅವರು ಕೂಚ್ ಬೆಹರ್‌ಗೆ ಹೋಗುವುದನ್ನು ತಡೆಯುವ ಮೂಲಕ ಚುನಾವಣಾ ಆಯೋಗವು ತನ್ನನ್ನುತಾನು ಮಣ್ಣಿನಿಂದ ಮುಚ್ಚಿಕೊಂಡಿದೆ. ಇದೆಲ್ಲದರ ನಂತರವೂ ಅವರು ಬಂಗಾಳದಮುಖ್ಯಮಂತ್ರಿಯಾಗಿದ್ದಾರೆ. ಈ ದುರದೃಷ್ಟಕರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡುವುದು ಅವರ ಕರ್ತವ್ಯವಾಗಿದೆ. ಚುನಾವಣಾ ಆಯೋಗದ ಕ್ರಮನ್ಯಾಯಯುತವಾಗಿಲ್ಲ ಎಂದು ನಮಗೆ ತಿಳಿದಿದೆʼ ಎಂದು ಕಿಡಿಕಾರಿದ್ದಾರೆ.

ಇವನ್ನೂ ಓದಿ
*ಪಶ್ಚಿಮ ಬಂಗಾಳದ ಮತದಾನ ವೇಳೆ ಘರ್ಷಣೆ: ಗುಂಡು ಹಾರಿಸಿದ ಸಿಐಎಸ್ಎಫ್, 4 ಸಾವು
*ಪಶ್ಚಿಮ ಬಂಗಾಳ | ಕೂಚ್ ಬೆಹರ್ ಘರ್ಷಣೆ: ಶಾ ರಾಜೀನಾಮೆಗೆ ಮಮತಾ ಒತ್ತಾ
*ಪಶ್ಚಿಮ ಬಂಗಾಳದಲ್ಲಿ ಘರ್ಷಣೆ: ದಾಳಿಗೆ ಮಮತಾ ಕುಮ್ಮಕ್ಕು ಎಂದು ಪ್ರಧಾನಿ ಮೋದಿ ಆರೋಪ
*ಪಶ್ಚಿಮ ಬಂಗಾಳ ಗಲಭೆ: ಕೂಚ್ ಬೆಹರ್‌ಗೆ ಭೇಟಿ ನೀಡದಂತೆ ರಾಜಕಾರಣಿಗಳಿಗೆ ನಿಷೇಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.