ನವದೆಹಲಿ: ರಾಷ್ಟ್ರೀಯ ಕೋವಿಡ್ ಲಸಿಕಾ ಅಭಿಯಾನದ ಅನುಷ್ಠಾನಕ್ಕಾಗಿ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಇದೇ 21ರಿಂದ ಉಚಿತವಾಗಿ ಲಸಿಕೆ ವಿತರಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಘೋಷಿಸಿದ್ದರು. ಅದರಂತೆ ಹೊಸ ಲಸಿಕಾ ನೀತಿಯ ಮಾರ್ಗಸೂಚಿಗಳನ್ನು ಸರ್ಕಾರ ಮಂಗಳವಾರ ಬೆಳಗ್ಗೆ ಪ್ರಕಟಿಸಿದೆ.

ಇದನ್ನೂ ಓದಿ:ಕೇಂದ್ರದಿಂದ ಕೋವಿಡ್ ಲಸಿಕೆ ಎಲ್ಲರಿಗೂ ಉಚಿತ: ಪ್ರಧಾನಿ ಮೋದಿ

ಹೊಸ ಮಾರ್ಗ ಸೂಚಿಯ ಪ್ರಮುಖಾಂಶಗಳು

– ದೇಶದಲ್ಲಿ ಉತ್ಪಾದನೆಯಾಗುವ ಲಸಿಕೆಯಲ್ಲಿ ಶೇ 75 ಲಸಿಕೆಗಳನ್ನು ಭಾರತ ಸರ್ಕಾರ ಖರೀದಿಸುತ್ತದೆ. ಖರೀದಿಸಿದ ಲಸಿಕೆಗಳನ್ನು ರಾಷ್ಟ್ರೀಯ ಲಸಿಕಾ ಅಭಿಯಾನಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಸರ್ಕಾರಿ ಲಸಿಕಾ ಕೇಂದ್ರಗಳ ಮೂಲಕ ಆದ್ಯತೆ ಮೇರೆಗೆ ಎಲ್ಲಾ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.

– ರಾಜ್ಯಗಳಿಗ ಉಚಿತವಾಗಿ ನೀಡಲಾದ ಲಸಿಕೆಗಳನ್ನು ಆದ್ಯತೆ ಮೇರೆ ವಿತರಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೋವಿಡ್ ವಾರಿಯರ್‌ಗಳು, 45 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು, ಎರಡನೇ ಡೋಸ್ ಪಡೆಯಬೇಕಾದವರು ಮತ್ತು 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಆದ್ಯತೆಯಂತೆ ಲಸಿಕೆ ನೀಡಲಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರಗಳು ತಮ್ಮದೇ ಪ್ರತ್ಯೇಕ ಆದ್ಯತೆಗಳನ್ನು ಸೇರಿಸಬಹದು.

– ರಾಜ್ಯವೊಂದರ ಜನಸಂಖ್ಯೆ, ಕೋವಿಡ್ ಪ್ರಕರಣಗಳ ಸಂಖ್ಯೆ, ಲಸಿಕಾ ಅಭಿಯಾನದ ಪ್ರಗತಿಯಂಥ ಮಾನದಂಡಗಳ ಆಧಾರದ ಮೇಲೆ ಲಸಿಕೆಯನ್ನು ಪೂರೈಸಲಾಗುತ್ತದೆ. ಲಸಿಕೆಯನ್ನು ವ್ಯರ್ಥ ಮಾಡವುದೂ ಲಸಿಕೆ ಹಂಚಿಕೆ ಮೇಲೆ ಪರಿಣಾಮ ಬೀರಲಿದೆ ಎಂದೂ ಸರ್ಕಾರ ಹೇಳಿದೆ.

– ಲಸಿಕೆ ಲಭ್ಯತೆಯ ಮಾಹಿತಿಯನ್ನು ಜಿಲ್ಲೆ ಮತ್ತು ಲಸಿಕಾ ಕೇಂದ್ರಗಳಲ್ಲಿ ಸಾರ್ವಜನಿಕ ವಲಯಕ್ಕೆ ತಿಳಿಯಪಡಿಸಬೇಕು. ಲಸಿಕೆ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಕಟ್ಟಪ್ಪಣೆ ವಿಧಿಸಲಾಗಿದೆ.

– ಲಸಿಕೆ ತಯಾರಿಕಾ ಸಂಸ್ಥೆಗಳ ಒಟ್ಟಾರೆ ಉತ್ಪಾದನೆಯ ಶೇ 25ರಷ್ಟು ಲಸಿಕೆಗಳನ್ನು ಖರೀದಿಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಲಸಿಕೆಗೆ ಸೇವಾ ಶುಲ್ಕವಾಗಿ ಪ್ರತಿ ಡೋಸ್‌ಗೆ ಗರಿಷ್ಠ ₹150 ಪಡೆಯಲಷ್ಟೇ ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರಗಳು ಬೆಲೆಯ ಮೇಲೆ ನಿಗಾ ವಹಿಸಬಹುದಾಗಿದೆ.

– ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕಿಸದೇ ಎಲ್ಲ ನಾಗರಿಕರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಹಣ ನೀಡುವ ಸಾಮರ್ಥ್ಯವಿರುವವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು.

– ಕೋವಿನ್ ಆ್ಯಪ್, ವೆಬ್‌ಸೈಟ್ ಮೂಲಕ ಲಸಿಕೆ ನೋಂದಣಿ, ಲಭ್ಯತೆ, ಲಸಿಕೆ ವೇಳಾಪಟ್ಟಿಯ ಮಾಹಿತಿಯನ್ನು ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.