ಸ್ಥಳೀಯ ಸಂಸ್ಥೆಗಳ ಚುನಾವಣೆ ಪಕ್ಷದ ಕಾರ್ಯಕರ್ತರಿಗೆ ಸೇರಿದ್ದು. ನಮ್ಮ ಅನುಕೂಲಕ್ಕೆ ಅನುಗುಣವಾಗಿ ನಾವು ಸ್ಪರ್ಧಿಸಿದರೆ ಕಾರ್ಯಕರ್ತರು ಏನು ಮಾಡಬೇಕು? ನಾಯಕರ ಸುಪ್ಪತ್ತಿಗೆ ಎತ್ತುವ ಕೆಲಸ ಮಾತ್ರ ಮಾಡಬೇಕೇ?
– ಸುಪ್ರಿಯಾ ಸುಳೆ ಎನ್‌ಸಿಪಿ (ಎಸ್‌ಪಿ) ಕಾರ್ಯಕಾರಿ ಅಧ್ಯಕ್ಷೆ
‘ಕಾಂಗ್ರೆಸ್ ಹೊಣೆ ನಿಭಾಯಿಸಲಿ’
‘ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಇಂಡಿಯಾ ಮೈತ್ರಿಕೂಟವು ಒಂದು ಸಭೆಯನ್ನೂ ನಡೆಸಿಲ್ಲ. ಇಂಡಿಯಾ ಮೈತ್ರಿಕೂಟಕ್ಕೆ ಸಂಚಾಲಕರನ್ನು ನೇಮಿಸಿಲ್ಲ. ಇದು ಒಳ್ಳೆಯದಲ್ಲ. ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ ಸಭೆಯನ್ನು ಕರೆಯುವುದು ಕಾಂಗ್ರೆಸ್ಸಿನ ಹೊಣೆ’ ಎಂದು ಸಂಜಯ್ ರಾವುತ್ ಹೇಳಿದ್ದಾರೆ.