ಛತ್ರಪತಿ ಸಂಭಾಜಿನಗರ: ಸರಪಂಚ್ ಸಂತೋಷ್ ದೇಶಮುಖ್ ಹತ್ಯೆಗೆ ಸಂಬಂಧಿಸಿದಂತೆ ಸುಲಿಗೆಗಾಗಿ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಸಭೆಯ ಕುರಿತು ಧನಂಜಯ ಮುಂಡೆ ವಿವರಿಸಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಸುರೇಶ್ ದಾಸ್ ಮಂಗಳವಾರ ಹೇಳಿದ್ದಾರೆ.

ಸಂತೋಷ್ ದೇಶಮುಖ್ ಹತ್ಯೆ ಪ್ರಕರಣದಲ್ಲಿ ತಮ್ಮ ಆಪ್ತ ಸಹಾಯಕ ವಾಲ್ಮಿಕ್ ಕರಡ್ ಅವರನ್ನು ಮಾಸ್ಟರ್ ಮೈಂಡ್ ಎಂದು ಹೆಸರಿಸಿದ ಕೆಲವು ದಿನಗಳ ನಂತರ, ಇಂದು ಮುಂಡೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಾಸ್, ಸುಲಿಗೆ ಬಗ್ಗೆ ಮುಂಡೆ ಅವರ 'ಸತ್ಪುರ' ಬಂಗಲೆಯಲ್ಲಿ ಸಭೆ ನಡೆದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಮುಂಡೆ ಈ ಬಗ್ಗೆ ವಿವರಣೆ ನೀಡಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಎನ್ಸಿಪಿ ನಾಯಕ ಧನಂಜಯ ಮುಂಡೆ ಅವರು ವಾಲ್ಮಿಕ್ ಕರಡ್ ಅವರನ್ನು ಸಂಪೂರ್ಣವಾಗಿ ಅವಲಂಬಿಸಿದ್ದಾರೆ ಎಂದು ಅವರ ಸೋದರಸಂಬಂಧಿ, ಸಚಿವೆ ಪಂಕಜಾ ಮುಂಡೆ ಹೇಳಿದ್ದರು. ಹಾಗಾದರೆ, ಮುಂಡೆ ಅವರಿಗೆ ತಿಳಿಯದೆ ಸರಪಂಚರ ಕೊಲೆ ಹೇಗೆ ನಡೆದಿರಬಹುದು? ಎಂದು ದಾಸ್ ಪ್ರಶ್ನಿಸಿದ್ದಾರೆ.

ಬೀಡ್ನ ಮಸಾಜೋಗ್ ಗ್ರಾಮದ ಸರಪಂಚ್ ದೇಶಮುಖ್ ಅವರನ್ನು ಕಳೆದ ವರ್ಷ ಡಿಸೆಂಬರ್ 9ರಂದು ಜಿಲ್ಲೆಯ ಇಂಧನ ಕಂಪನಿಯನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಅಪಹರಿಸಿ, ಚಿತ್ರಹಿಂಸೆ ನೀಡಿ, ಕೊಲೆ ಮಾಡಲಾಗಿತ್ತು.

ಹತ್ಯೆಗೆ ಸಂಬಂಧಿಸಿದ ಭೀಕರ ಫೋಟೊಗಳು ಮತ್ತು ನ್ಯಾಯಾಲಯದ ಆರೋಪಪಟ್ಟಿ ಮುಂಡೆ ಆಪ್ತನ ಹೆಸರಿರುವ ವಿವರಗಳು ಹೊರಬಂದ ನಂತರ ಪ್ರತಿಪಕ್ಷಗಳು ಮುಂಡೆ ಅವರ ರಾಜೀನಾಮೆಗೆ ಒತ್ತಾಯವನ್ನು ತೀವ್ರಗೊಳಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.