ನವದೆಹಲಿ: ಶಾಸಕ ಅಬ್ಬಾಸ್ ಅನ್ಸಾರಿ ವಿರುದ್ಧ ಗೂಂಡಾ ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಶುಕ್ರವಾರ ನಿರ್ದೇಶನ ನೀಡಿದೆ.

ಪ್ರಕರಣದ ತನಿಖೆ ಮುಗಿದ ನಂತರ ಅನ್ಸಾರಿ ಅವರ ಜಾಮೀನು ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ತಿಳಿಸಿದೆ.

ಅನ್ಸಾರಿ ಮತ್ತು ಇತರ ಕೆಲವರು ಗ್ಯಾಂಗ್ ರಚಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ 2024ರ ಆಗಸ್ಟ್ 31ರಂದು ಚಿತ್ರಕೂಟ ಜಿಲ್ಲೆಯ ಕೊತ್ವಾಲಿ ಕಾರ್ವಿ ಪೊಲೀಸ್ ಠಾಣೆಯಲ್ಲಿ ದರೋಡೆಕೋರರು ಮತ್ತು ಸಮಾಜವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1986ರ ಸೆಕ್ಷನ್ 2, 3ರ ಅಡಿಯಲ್ಲಿ ಅನ್ಸಾರಿ, ನವನೀತ್ ಸಚನ್, ನಿಯಾಜ್ ಅನ್ಸಾರಿ , ಫರಾಜ್ ಖಾನ್ ಮತ್ತು ಶಹಬಾಜ್ ಆಲಂ ಖಾನ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಇವರ ವಿರುದ್ಧ ಸುಲಿಗೆ ಮತ್ತು ಹಲ್ಲೆ ಆರೋಪ ಹೊರಿಸಲಾಗಿತ್ತು.

ಈ ಸಂಬಂಧ 2024ರ ಸೆಪ್ಟೆಂಬರ್ 6ರಂದು ಅನ್ಸಾರಿ ಅವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಜಾಮೀನು ಕೋರಿ ಅವರು ಸಲ್ಲಿಸಲಾದ ಅರ್ಜಿಯನ್ನು ಡಿಸೆಂಬರ್ 18ರಂದು, ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದೂ ಕೋರ್ಟ್ ಹೇಳಿತ್ತು.
.ಹಣ ಅಕ್ರಮ ವರ್ಗಾವಣೆ: ಶಾಸಕ ಅಬ್ಬಾಸ್ ಅನ್ಸಾರಿಗೆ ಸುಪ್ರೀಂ ಕೋರ್ಟ್ನಿಂದ ಜಾಮೀನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.