ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಬಳಿಗೆ ತೆರಳಿ ನ್ಯಾಯ ಕೇಳುತ್ತೇವೆ: ಪನ್ನೀರ್‌ಸೆಲ್ವಂ

Last Updated 24 ಫೆಬ್ರುವರಿ 2023, 10:29 IST
ಅಕ್ಷರ ಗಾತ್ರ

ಚೆನ್ನೈ: ‘ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲು ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿರುವುದರಿಂದ ನಮಗೆ ಹಿನ್ನಡೆಯಾಗಿಲ್ಲ. ನಾವು ಜನರ ಬಳಿಗೆ ಹೋಗಿ ನ್ಯಾಯ ಕೇಳುತ್ತೇವೆ’ ಎಂದು ಪಕ್ಷದ ಪದಚ್ಯುತ ಮುಖಂಡ ಒ.ಪನ್ನೀರ್‌ಸೆಲ್ವಂ ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ.

‘ಧರ್ಮ ಯುದ್ಧ ನಡೆಯುತ್ತಿದೆ. ನಾವು ಧರ್ಮದ ಪರವಾಗಿ ನಿಂತು ನ್ಯಾಯ ಕೇಳಲಿದ್ದೇವೆ. ನಾನು ಮತ್ತು ಬೆಂಬಲಿಗರು ಶೀಘ್ರವೇ ರಾಜ್ಯದ ಪ್ರತಿ ಜಿಲ್ಲೆಗಳಿಗೆ ತೆರಳಿ ಜನರನ್ನು ಭೇಟಿಯಾಗಲಿದ್ದೇವೆ’ ಎಂದೂ ವಿವರಿಸಿದ್ದಾರೆ.

ಆಡಳಿತಾರೂಢ ಡಿಎಂಕೆಯ ‘ಬಿ’ ಟೀಮ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಆರೋಪದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪನ್ನೀರ್‌ಸೆಲ್ವಂ, ‘ಪಳನಿಸ್ವಾಮಿ ಪಾಳಯದವರು ಡಿಎಂಕೆಯ ‘ಎ’ಯಿಂದ ‘ಝೆಡ್‌’ ಟೀಮ್‌ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT