ನವದೆಹಲಿ: ‘ಡಿಜಿಲೀಕರಣದ ಮತ್ತೊಂದು ಹೆಜ್ಜೆಯಾಗಿ ಹಾಗೂ ಸುಪ್ರೀಂ ಕೋರ್ಟ್ ಅನ್ನು ‘ಕಾಗದರಹಿತ’ವನ್ನಾಗಿಸುವ ನಿಟ್ಟಿನಲ್ಲಿ, ವಕೀಲರು ಜ. 1ರಿಂದ ಹಾಜರಾತಿಯನ್ನು ತೋರಿಸಲು ಹಸ್ತಚಾಲಿತ ಸ್ಲಿಪ್ ನೀಡಬೇಕಿಲ್ಲ. ಅವರು ‘ಅಡ್ವೊಕೇಟ್ ಅಪಿಯರೆನ್ಸ್ ಪೋರ್ಟಲ್’ಗೆ ಲಾಗಿನ್ ಆದರೆ ಸಾಕು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಶುಕ್ರವಾರ ಹೇಳಿದ್ದಾರೆ.

‘2023ರ ಜ. 1ರಂದು ಅಡ್ವೊಕೇಟ್ ಅಪಿಯರೆನ್ಸ್ ಪೋರ್ಟಲ್’ಗೆ ಚಾಲನೆ ನೀಡಲಾಗುವುದು. ವಕೀಲರ ಹಾಜರಾತಿಯ ಹಸ್ತಚಾಲಿತ ಸ್ಲಿಮ್ ಇನ್ನು ಇತಿಹಾಸ ಸೇರಲಿದೆ’ಎಂದು ಸಿಜೆಐ ಅವರು ತಿಳಿಸಿದ್ದಾರೆ.

‘ವಿಚಾರಣೆಯ ದಾಖಲೆಯಲ್ಲಿ ವಕೀಲರ ನೋಟವನ್ನು ದಾಖಲಿಸಲು ವೇಗ, ನಿಖರತೆ ಮತ್ತು ಪರಿಣಾಮಕಾರಿತ್ವವನ್ನು ತರಲು ಪೋರ್ಟಲ್ ಅನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ಈ ಆನ್‌ಲೈನ್ ಸೌಲಭ್ಯವು ಪರಿಸರಸ್ನೇಹಿ ಹೆಜ್ಜೆಯಾಗಿದೆ. ಇದರಿಂದಾಗಿ ವರ್ಷಕ್ಕೆ ಸುಮಾರು 2 ಲಕ್ಷದಷ್ಟು ಕಾಗದವನ್ನು ಉಳಿಸಬಹುದಾಗಿದೆ’ ಎಂದೂ ಸುಪ್ರೀಂಕೋರ್ಟ್‌ನ ಪ್ರಕಟಣೆಯು ತಿಳಿಸಿದೆ.

ಪ್ರಸ್ತುತ, ಸುಪ್ರೀಂ ಕೋರ್ಟ್‌ನಲ್ಲಿಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ವಕೀಲರು ತಮ್ಮ ಹಾಜರಾತಿಗಾಗಿ ಪ್ರಕರಣ ಮತ್ತು ಅದರ ಕ್ರಮಸಂಖ್ಯೆ ಹಾಗೂ ತಮ್ಮ ಹೆಸರನ್ನು ನಿಗದಿಪಡಿಸಿದ ಕಾಗದದಲ್ಲಿ ಬರೆಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.