ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಖಾಲಿಸ್ತಾನ ಪ್ರತಿಪಾದಕ: ಅಮೃತ್‌ಪಾಲ್‌ ಸಿಂಗ್‌ ಸಹಚರನ ಬಂಧನ

Last Updated 10 ಏಪ್ರಿಲ್ 2023, 11:07 IST
ಅಕ್ಷರ ಗಾತ್ರ

ಚಂಡೀಗಢ: ಪ್ರತ್ಯೇಕ ಖಾಲಿಸ್ತಾನ ಪ್ರತಿಪಾದಕ, ಸಿಖ್‌ ಧರ್ಮ ಪ್ರಚಾರಕ ಅಮೃತ್‌ಪಾಲ್‌ ಸಿಂಗ್‌ನ ಸಹಚರ ಪಪಲ್​ಪ್ರೀತ್ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿನ ಡೇರಾದಲ್ಲಿ ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಾರ ಇದೇ ಡೇರಾದಲ್ಲಿ ಪಪಲ್​ಪ್ರೀತ್ ಸಿಂಗ್‌ ಇರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭಿಸಿದ್ದವು.

ಪಪಲ್​ಪ್ರೀತ್​ ಸಿಂಗ್​ನ ಬಂಧನವಾಗಿದ್ದು ಕೆಲ ದಿನಗಳಲ್ಲಿ ಅಮೃತ್​ಪಾಲ್​ ಸಿಂಗ್ ಬಂಧನವಾಗಬಹುದು ಎಂದು ಪಂಜಾಬ್‌ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪರಾರಿಯಾದ ಅಮೃತಪಾಲ್ ಸಿಂಗ್ ಮತ್ತು ಆತನ ಸಹಾಯಕರು ಜಲಂಧರ್, ಹೋಶಿಯಾರ್‌ಪುರ ಮತ್ತು ಅಮೃತಸರ ಜಿಲ್ಲೆಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದ ಡೇರಾಗಳಲ್ಲಿ ಆಶ್ರಯ ಪಡೆದಿದ್ದರು. ಅಮೃತಪಾಲ್ ಮತ್ತು ಪಪಲ್​ಪ್ರೀತ್ ಸಿಂಗ್‌ ಫಗ್ವಾರಾ ಪಟ್ಟಣ, ನಾದ್ಲೋನ್ ಮತ್ತು ಬೀಬಿ ಗ್ರಾಮದ ಮೂರು ವಿಭಿನ್ನ ಡೇರಾಗಳಲ್ಲಿ ತಂಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾರ್ಚ್ 18ರಿಂದ ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಮೃತಪಾಲ್ ಸಿಂಗ್‌ನ ನೂರಾರು ಬೆಂಬಲಿಗರನ್ನು ಬಂಧಿಸಲಾಗಿದೆ. ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರೈಫಲ್, ರಿವಾಲ್ವರ್, ಸಜೀವ ಗುಂಡುಗಳನ್ನು ಜಪ್ತಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT