ನವದೆಹಲಿ: ಕುಖ್ಯಾತ ಸರಣಿ ಹಂತಕನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ ಪೆರೋಲ್ ಮೇಲೆ ಹೊರಗೆ ಬಂದಿದ್ದ ಈತ ಬಳಿಕ ತಲೆಮರೆಸಿಕೊಂಡ ಎಂದು ಪೊಲಿಸರು ತಿಳಿಸಿದ್ಧಾರೆ. ರಾಜಸ್ಥಾನದ ದೌಸಾದಲ್ಲಿರುವ ಆಶ್ರಮವೊಂದರಲ್ಲಿ ವೇಷ ಬದಲಿಸಿಕೊಂಡು ಅರ್ಚಕನಂತೆ ನಟಿಸುತ್ತಿದ್ದ ಅಪರಾಧಿಯನ್ನು ಸೋಮವಾರ ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ.

67 ವರ್ಷದ ದೇವೇಂದರ್ ಶರ್ಮಾ ಬಹು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ದೆಹಲಿ, ರಾಜಸ್ಥಾನ ಮತ್ತು ಹರಿಯಾಣದಾದ್ಯಂತ ಏಳು ಪ್ರತ್ಯೇಕ ಪ್ರಕರಣಗಳಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2002 ಮತ್ತು 2004ರ ನಡುವೆ ಹಲವು ಟ್ಯಾಕ್ಸಿ ಮತ್ತು ಟ್ರಕ್ ಚಾಲಕರ ಕ್ರೂರ ಹತ್ಯೆಗಳಿಗಾಗಿ ಶರ್ಮಾ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದನು. 2023ರ ಆಗಸ್ಟ್ನಲ್ಲಿ ಪೆರೋಲ್ ಪಡೆದು ಹೊರಬಂದಿದ್ದನು ಎಂದು ಪೊಲೀಸ್ ಉಪ ಆಯುಕ್ತ (ಅಪರಾಧ ವಿಭಾಗ) ಆದಿತ್ಯ ಗೌತಮ್ ಹೇಳಿದ್ದಾರೆ.

'ಪ್ರವಾಸದ ನೆಪದಲ್ಲಿ ವಾಹನಗಳನ್ನು ಕರೆಸುತ್ತಿದ್ದ ಶರ್ಮಾ ಮತ್ತು ಅವನ ಸಹಚರರು, ಚಾಲಕರನ್ನು ಕೊಲೆ ಮಾಡಿ ವಾಹನಗಳನ್ನು ಮಾರಾಟ ಮಾಡುತ್ತಿದ್ದರು. ಮೃತದೇಹಗಳನ್ನು ಕಾಸ್ಗಂಜ್ನ ಮೊಸಳೆಗಳಿದ್ದ ಹಜಾರ ಕಾಲುವೆಗೆ ಹಾಕುತ್ತಿದ್ದರು ಎಂದು ಡಿಸಿಪಿ ಗೌತಮ್ ಹೇಳಿದ್ದಾರೆ.

ಶರ್ಮಾಗೆ ಸುದೀರ್ಘ ಕ್ರಿಮಿನಲ್ ಹಿನ್ನೆಲೆ ಇದ್ದು ಕೊಲೆ, ದರೋಡೆ ಮತ್ತು ಅಪಹರಣ ಸಂಬಂಧಿತ 27 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.

1995ರ ಮತ್ತು 2004ರ ನಡುವೆ ಅಕ್ರಮ ಮೂತ್ರಪಿಂಡ ಕಸಿ ಜಾಲವನ್ನು ನಡೆಸುವುದರ ಮೂಲಕ ಅಪರಾಧ ಕೃತ್ಯಗಳನ್ನು ಆರಂಭಿಸಿದ್ದನು. ಬಿಎಎಂಎಸ್ (ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಪದವಿ) ಪದವಿ ಪಡೆದ ಶರ್ಮಾ, 1984ರಲ್ಲಿ ರಾಜಸ್ಥಾನದಲ್ಲಿ ಒಂದು ಕ್ಲಿನಿಕ್ ಅನ್ನು ತೆರೆದಿದ್ದನು. ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಮಧ್ಯವರ್ತಿಗಳ ಸಹಾಯದಿಂದ 125ಕ್ಕೂ ಹೆಚ್ಚು ಅಕ್ರಮ ಮೂತ್ರಪಿಂಡ ಕಸಿ ನಡೆಸಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡನು.

ಬಳಿಕ, ಅನಿಲ ಡೀಲರ್ಶಿಪ್ ವ್ಯವಹಾರದಲ್ಲಿ ಭಾರೀ ನಷ್ಟ ಅನುಭವಿಸಿದ ನಂತರ ಚಾಲಕರನ್ನು ಕೊಂದು ವಾಹನ ಕದ್ದು ಮಾರಾಟ ಮಾಡುವ ದುಷ್ಕೃತ್ಯಕ್ಕೆ ಕೈಹಾಕಿದ್ದನು.

ಶರ್ಮಾ ಎರಡು ಡಜನ್ಗೂ ಹೆಚ್ಚು ಜನರನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ, ಸುಪಾರಿ ಹತ್ಯೆ ಮಾಡುತ್ತಿದ್ದ ಶರ್ಮಾ, ಪ್ರತಿ ಪ್ರಕರಣಕ್ಕೆ ₹7 ಲಕ್ಷ.ಪಡೆಯುತ್ತಿದ್ದ ಎಂದು ಅವರು ಹೇಳಿದ್ದಾರೆ.

ಮೂತ್ರಪಿಂಡ ಜಾಲ ಮತ್ತು ಸರಣಿ ಹತ್ಯೆಗಳಿಗೆ ಸಂಬಂಧಿಸಿದಂತೆ ಶರ್ಮಾ ಅವರನ್ನು 2004ರಲ್ಲಿ ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.