ಮಕಾವ್: ಲಕ್ಷ್ಯ ಸೇನ್ ಮತ್ತು ತರುಣ್ ಮನ್ನೇಪಲ್ಲಿ ಅವರು ಮಕಾವ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ನಲ್ಲಿ ಶನಿವಾರ ಹೊರಬಿದ್ದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಕೊನೆಗೊಂಡಿತು.

ಇವರಿಬ್ಬರ ವಿರುದ್ಧ ಕ್ರಮವಾಗಿ ಗೆದ್ದ ಅಲ್ವಿ ಫರ್ಹಾನ್ ಮತ್ತು ಜಸ್ಟಿನ್ ಹೊ ಅವರು ಭಾನುವಾರ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

2021ರ ವಿಶ್ವ ಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಅವರು ಇಂಡೊನೇಷ್ಯಾದ ಅಲ್ವಿ ಫರ್ಹಾನ್ ಅವರ ವೇಗ ಮತ್ತು ಕರಾರುವಾಕ್ ಹೊಡೆತಗಳಿಗೆ ಸಾಟಿಯಾಗಲಿಲ್ಲ. ಅಲ್ವಿ ಸೆಮಿಫೈನಲ್ ಪಂದ್ಯವನ್ನು 21–16, 21–9 ರಿಂದ ಕೇವಲ 39 ನಿಮಿಷಗಳಲ್ಲಿ ಗೆದ್ದರು. ಈ ಮೂಲಕ ಲಕ್ಷ್ಯ ಅವರ ಪ್ರಶಸ್ತಿ ಬರ ಮುಂದುವರಿಯಿತು.

47ನೇ ಕ್ರಮಾಂಕದ ಆಟಗಾರ, ತರುಣ್ ಮನ್ನೇಪಲ್ಲಿ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ 21–19, 16–21, 16–21 ರಿಂದ ಮಲೇಷ್ಯಾದ ಜಸ್ಟಿನ್ ಹೊ ಅವರನ್ನು ಒಂದು ಗಂಟೆ 21 ನಿಮಿಷಗಳಲ್ಲಿ ಸೋಲಿಸಿದರು.
.ಮಕಾವು ಓಪನ್ ಬ್ಯಾಡ್ಮಿಂಟನ್: ಶ್ರೀಕಾಂತ್, ಆಯುಷ್ಗೆ ಸುಲಭ ಜಯ.ಅಮೆರಿಕ ಓಪನ್ ಬ್ಯಾಡ್ಮಿಂಟನ್: ಫೈನಲ್ಗೆ ಲಗ್ಗೆ ಇಟ್ಟ ಭಾರತದ ತನ್ವಿ-ಆಯುಷ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.