ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲ್ಕ್ಯಾರಾ ಸುರಂಗ ಮಾರ್ಗ ತಪಾಸಣೆ ಬಳಿಕವೇ ಕಾಮಗಾರಿ: ಅಧಿಕಾರಿ

Published 29 ನವೆಂಬರ್ 2023, 16:53 IST
Last Updated 29 ನವೆಂಬರ್ 2023, 16:53 IST
ಅಕ್ಷರ ಗಾತ್ರ

ನವದೆಹಲಿ: ಸಿಲ್ಕ್ಯಾರಾ ಸುರಂಗಮಾರ್ಗದಲ್ಲಿ ಅಗತ್ಯ ಸುರಕ್ಷತಾ ತಪಾಸಣೆ ನಡೆಸಿ, ಕುಸಿದ ಭಾಗವನ್ನು ದುರಸ್ತಿಗೊಳಿಸಿದ ಬಳಿಕವೇ ಯೋಜನೆಯ ಕಾಮಗಾರಿಯನ್ನು ಮುಂದುವರೆಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

‘ಸಿಲ್ಕ್ಯಾರ ಸುರಂಗಮಾರ್ಗ ಯೋಜನೆಯನ್ನು ಸಂಪೂರ್ಣವಾಗಿ ಪರಿಶೀಲನೆಗೆ ಒಳಪಡಿಸುತ್ತೇವೆ. ಜೊತೆಗೆ ಕೆಲವು ವ್ಯವಸ್ಥೆಗಳನ್ನು ಉತ್ತಮಪಡಿಸುತ್ತೇವೆ’ ಎಂದು ಸಚಿವಾಲಯದ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಸುರಂಗ ಕುಸಿದ ಕಾರಣ ತಿಳಿಯಲು ಉತ್ತರಾಖಂಡ ಸರ್ಕಾರವು ಈಗಾಗಲೇ ತಜ್ಞರ ತಂಡವೊಂದನ್ನು ರಚಿಸಿದೆ. ಮತ್ತೊಂದು ತಂಡ ರಚಿಸಲು ಸಚಿವಾಲಯ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT