ಕೋಲ್ಕತ್ತ: ಮನೆಮನೆಗೆ ಭೇಟಿ ನೀಡುವ ಬದಲಾಗಿ ಚಹಾದಂಗಡಿಗಳಲ್ಲಿ, ಸ್ಥಳೀಯ ಕ್ಲಬ್ಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್ನ) ನಮೂನೆ ನೀಡಿದ ಆರೋಪದಲ್ಲಿ ಪಶ್ಚಿಮ ಬಂಗಾಳದ 8 ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒ) ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ಪಶ್ಚಿಮ ಬಂಗಾಳ: ಮತದಾರರ ಪಟ್ಟಿಯಿಂದ ತೆಗೆಯುತ್ತಾರೆ ಎಂದು ಹೆದರಿಕೊಂಡು ಆತ್ಮಹತ್ಯೆ .
ಅಲ್ಲದೆ ಎಸ್ಐಆರ್ ಪ್ರಕ್ರಿಯೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುವನ್ನು ಖಚಿತಪಡಿಸಿಕೊಳ್ಳಲು ಹೊಸ ನಿರ್ದೇಶನಗಳನ್ನೂ ಆಯೋಗ ಜಾರಿ ಮಾಡಿದೆ

ಪ್ರಕ್ರಿಯೆಯಲ್ಲಿ ಉಂಟಾಗಿರುವ ದೋಷಗಳ ಬಗ್ಗೆ ಚುನಾವಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಕೋಲ್ಕತ್ತದಲ್ಲಿರುವ ಮುಖ್ಯ ಚುನಾವಣಾ ಕಚೇರಿಯಲ್ಲಿರುವ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಬಿಎಲ್ಒಗಳು ಪ್ರತಿ ಮನೆಗೂ ತೆರಳಿ ನಮೂನೆಯನ್ನು ನೀಡಿ, ಭರ್ತಿ ಮಾಡಿದ್ದನ್ನು ಸಂಗ್ರಹಿಸಿದ್ದಾರೆ ಎನ್ನುವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
.ಪಶ್ಚಿಮ ಬಂಗಾಳ | ಎಸ್ಐಆರ್ ಜಾರಿಗೆ ಸಿದ್ಧತೆ: ಪರಿಶೀಲನಾ ಸಭೆ ನಡೆಸಿದ ಸಿಇಒ.
ಪ್ರತಿ ಮನೆಗೆ ಹೋಗಿ ನಮೂನೆ ನೀಡಿ, ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸುವ ‘ಬಿಹಾರ ಮಾದರಿ’ಯನ್ನು ಬಿಎಲ್ಒಗಳು ಅನುಸರಿಸಬೇಕು ಎಂದು ಆಯೋಗ ಸೂಚನೆ ನೀಡಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

‘ಕರ್ತವ್ಯದಲ್ಲಿ ಲೋಪ ಎಸಗಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಸೂಚನೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಈಗಾಗಲೇ 8 ಬಿಎಲ್ಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
.ದುರ್ಬಲ ರಾಜ್ಯವಾಗುತ್ತಿದೆ ಪಶ್ಚಿಮ ಬಂಗಾಳ: ರಾಜ್ಯಪಾಲ ಬೋಸ್ .
ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು,ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ರಚಿಸಲು ಹಾಗೂ ಪ್ರತಿ 10 ಬೂತ್ಗಳಿಗೆ ಒಬ್ಬ ಬಿಎಲ್ಒ ಮೇಲ್ವಿಚಾರಕರನ್ನು ನೇಮಿಸಲು ಚುನಾವಣಾ ಆಯೋಗವು ಆದೇಶಿಸಿದೆ ಎಂದು ಅವರು ಹೇಳಿದ್ದಾರೆ.

ಹೆಚ್ಚುವರಿಯಾಗಿ, ಬಿಎಲ್ಒಗಳಿಗೆ ಸಂಬಂಧಿಸಿದ ದೂರುಗಳು ಹಾಗೂ ಪ್ರಕ್ರಿಯೆಯಲ್ಲಿ ಏನಾದರೂ ಅಕ್ರಮ ನಡೆದರೆ ದೂರು ಸಲ್ಲಿಸಲು ವಿಶೇಷ ಸಹಾಯವಾಣಿಯನ್ನೂ ಚುನಾವಣಾ ಆಯೋಗ ತೆರೆದಿದೆ.
.ಪಶ್ಚಿಮ ಬಂಗಾಳ ಅಪರಾಧಿಗಳಿಗೆ ಸುರಕ್ಷಿತ ಸ್ಥಳ, ಮಹಿಳೆಯರಿಗೆ ಅಲ್ಲ: ಸಿಪಿಐ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.