ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಜಾರಿಗೆ ಸಿದ್ಧತೆ ನಡೆದಿದ್ದು, ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಇಂದು (ಸೋಮವಾರ) ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳೊಂದಿಗೆ ಸಭೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಡಿಎಂಗಳೊಂದಿಗೆ ಸಿಇಒ ವರ್ಚುವಲ್ ಮೂಲಕ ಸಭೆ ನಡೆಸಿದ್ದಾರೆ. ನಾಳೆ (ನ.4) ಎಸ್ಐಆರ್ ಜಾರಿ ಹಿನ್ನೆಲೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಬ್ಲಾಕ್ ಮಟ್ಟದ ಅಧಿಕಾರಿಗಳು (ಬಿಎಲ್ಒಗಳು) ಮತ್ತು ಇತರ ಅಧಿಕಾರಿಗಳು ಮಂಗಳವಾರದಿಂದ ಮನೆ ಮನೆಗೆ ಭೇಟಿ ನೀಡಿ, ನಿರ್ಭಯವಾಗಿ ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿದೆ.

ನವೆಂಬರ್ 4ರಿಂದ ಡಿಸೆಂಬರ್ 4ರವರೆಗೆ ಎಸ್ಐಆರ್ ಪ್ರಕ್ರಿಯೆ ನಡೆಯಲಿದೆ. ಬಿಎಲ್ಒಗಳು ಮತದಾರರಿಗೆ ವಿಶಿಷ್ಟ ಗಣತಿ ನಮೂನೆಗಳನ್ನು ವಿತರಿಸುತ್ತಾರೆ. ಮತದಾರರು ಈ ಗಣತಿ ನಮೂನೆಗಳನ್ನು ಆಫ್ಲೈನ್ ಅಥವಾ ಆನ್ಲೈನ್ನಲ್ಲಿ ಭರ್ತಿ ಮಾಡಬಹುದು ಎಂದು ಅವರು ಹೇಳಿದ್ದಾರೆ.
.ಎಸ್ಐಆರ್ | ಹಾವಿನ ಹುತ್ತದಲ್ಲಿ ಕಾರ್ಬಾಲಿಕ್ ಆಮ್ಲ ಸುರಿದಂತೆ: ಸುವೇಂದು ಅಧಿಕಾರಿ