ಚಂಡೀಗಢ (ಪಿಟಿಐ): ‘ಪಾಕಿಸ್ತಾನ ಮೂಲದ, ಐಎಸ್‌ಐ ಬೆಂಬಲಿತ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂದಾ ಎಂಬಾತನ ಆರು ಸಹಚರರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.
‘ಪಂಜಾಬ್‌ನಲ್ಲಿ ಆಘಾತಕಾರಿ ಅಪರಾಧಗಳನ್ನು ಎಸಗಲು ಯೋಜನೆ ರೂಪಿಸಿದ್ದ ಇವರೆಲ್ಲರನ್ನೂ ಮೊಹಾಲಿ ಪೊಲೀಸ್‌ನ ಪಾತಕಿ ನಿಗ್ರಹ ಕಾರ್ಯಪಡೆಯು ಬಂಧಿಸಿದೆ’ ಎಂದು ಡಿಜಿಪಿ ಗೌರವ್ ಯಾದವ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.