ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇದು ಊಟದ ಸಮಯ ಎಂದು 'ಗೂಳಿ'ಯನ್ನು ಹೊರಗೆ ಕಳುಹಿಸಿದ ಬ್ಯಾಂಕ್‌ ಸಿಬ್ಬಂದಿ!

Published : 11 ಜನವರಿ 2024, 6:32 IST
Last Updated : 11 ಜನವರಿ 2024, 6:32 IST
ಫಾಲೋ ಮಾಡಿ
Comments

–ಇದು ಊಟದ ಸಮಯ ಎಂದು ಹೇಳಿ ಬ್ಯಾಂಕ್‌ ಒಳಗೆ ಬಂದಿದ್ದ ಗೂಳಿಯನ್ನು ಸಿಬ್ಬಂದಿ ಹೊರಕಳಿಸಿರುವ ಘಟನೆ ಉತ್ತರಪ್ರದೇಶದ ಶಹಗಂಜ್ ‍ಪಟ್ಟಣದಲ್ಲಿ ನಡೆದಿದೆ. !!!

ಅಂತಹದ್ದು ಏನೂ ಇಲ್ಲ... ಬ್ಯಾಂಕ್‌ ಒಳಗೆ ಬಂದಿದ್ದ ಗೂಳಿಯ ಬಗ್ಗೆ ನೆಟ್ಟಿಗರು ಮೇಲಿನ ರೀತಿಯಲ್ಲಿ ತಮಾಷೆ ಮಾಡುತ್ತಿದ್ದಾರೆ.

ಘಟನೆ ಇಷ್ಟು...

ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿ ಕೆಲಸ ಮುಗಿಸಿ ಮಧ್ಯಾಹ್ನದ ಊಟಕ್ಕೆ ಕುಳಿತಿದ್ದರು. ಈ ವೇಳೆ ಗೂಳಿಯೊಂದು ಬ್ಯಾಂಕ್‌ ಒಳಗೆ ಬಂದಿದ್ದರಿಂದ ಸಿಬ್ಬಂದಿ ಕೆಲಕ್ಷಣ ಗಾಬರಿಯಾಗಿದ್ದರು. ಗೂಳಿ ಕಚೇರಿಯಲ್ಲಿ ಯಾವುದೇ ಅವಾಂತರ ಮಾಡದೇ ಅಲ್ಲಿಂದ ತೆರಳಿತು ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ. 

ನಮ್ಮ ಸಿಬ್ಬಂದಿ ಊಟ ಮಾಡುತ್ತಿದ್ದರಿಂದ ಬಾಗಿಲು ಬಳಿ ಯಾರೂ ಇರಲಿಲ್ಲ, ಊಟದ ಸಮಯವಾದ್ದರಿಂದ ಗ್ರಾಹಕರು ಇರಲಿಲ್ಲ, ಈ ವೇಳೆ ಗೂಳಿ ನೇರವಾಗಿ ಬ್ಯಾಂಕ್‌ ಒಳಗೆ ಬಂದು ಕೆಲವೊತ್ತು ನಿಂತಲ್ಲೇ ನಿಂತಿತ್ತು. ನಂತರ ಭದ್ರತಾ ಸಿಬ್ಬಂದಿ ರೈಫಲ್ ಹಾಗೂ ಕೋಲು ಹಿಡಿದು ಗೂಳಿಯನ್ನು ಓಡಿಸಿದರು ಎಂದು ಬ್ಯಾಂಕ್‌ ಮ್ಯಾನೇಜರ್‌ ಹೇಳಿದ್ದಾರೆ. 

ಗೂಳಿ ಬ್ಯಾಂಕಿನೊಳಗೆ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಗದ್ದಲ ಉಂಟಾಗಿತ್ತು. ಇದನ್ನು ಗ್ರಾಹಕರೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಗೂಳಿ ಸಾಲ ಕೇಳಲು ಬ್ಯಾಂಕಿಗೆ ಬಂದಿದೆ! ಆಧಾರ್ ಕಾರ್ಡ್‌, ಪಾನ್‌ ಕಾರ್ಡ್‌ ಇಲ್ಲದ್ದಕ್ಕೆ ಸಿಬ್ಬಂದಿ ಸಾಲ ಕೊಡದೇ ವಾಪಸ್‌ ಕಳಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಊಟದ ಸಮಯದಲ್ಲಿ ಬ್ಯಾಂಕ್‌ಗೆ ಯಾಕೆ ಹೋದೆ? ಎಂದು ಗೂಳಿಯನ್ನೇ ಪ್ರಶ್ನೆ ಮಾಡಿದ್ದಾರೆ. 

ಈ ವಿಡಿಯೊಗೆ ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT