ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ವಿಸ್ತರಣೆ ಬಗ್ಗೆ ಸಾಮಾಜಿಕ ತಾಣದಲ್ಲಿ ಕಂಡ ಪ್ರತಿಕ್ರಿಯೆ, ಮೀಮ್‌ಗಳಿವು

Last Updated 12 ಏಪ್ರಿಲ್ 2020, 8:16 IST
ಅಕ್ಷರ ಗಾತ್ರ

ಕರೋನ ವೈರಸ್ (ಕೋವಿಡ್‌–19) ವಿರುದ್ಧದ ಹೋರಾಟದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಶನಿವಾರ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದರು. ಲಾಕ್‌ಡೌನ್ ಅನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸುವ ಬಗ್ಗೆ ಸಭೆಯಲ್ಲಿ ವ್ಯಾಪಕ ಒಮ್ಮತ ದೊರೆತಿದೆ. ಮಾರ್ಚ್ 25 ರಿಂದ ಜಾರಿಯಾಗಿದ್ದ ಲಾಕ್‌ಡೌನ್ ಏಪ್ರಿಲ್ 14 ಕ್ಕೆ ಕೊನೆಗೊಳ್ಳಬೇಕಿತ್ತು. ಈ ಗಡುವಿಗೆ ಮೊದಲೇ ನಡೆದ ಸಭೆಯಲ್ಲಿ ಲಾಕ್‌ಡೌನ್‌ ವಿಸ್ತರಿಸುವ ಕುರಿತು ಮಾತುಕತೆ ನಡೆದಿದೆ.

ಈ ಮಧ್ಯೆ ಮಹಾರಾಷ್ಟ್ರ, ತೆಲಂಗಾಣ, ಪಂಜಾಬ್ ಮತ್ತು ಒಡಿಶಾ ರಾಜ್ಯಗಳು ಲಾಕ್‌ಡೌನ್ ಅನ್ನು ಏಪ್ರಿಲ್ 30 ರವರೆಗೆ ವಿಸ್ತರಿಸುವುದಾಗಿ ಘೋಷಣೆಯನ್ನೂ ಮಾಡಿವೆ. ಇಡೀ ದೇಶದಲ್ಲಿ ಲಾಕ್‌ಡೌನ್‌ ಅನ್ನು ಎರಡು ವಾರಗಳ ಕಾಲ ವಿಸ್ತರಿಸುವ ಮುನ್ಸೂಚನೆಗಳು ಸಿಗುತ್ತಲೇ ಸಾಮಾಜಿಕ ಮಾದ್ಯಮದಲ್ಲಿ ಬೆಂಬಲ ವ್ಯಕ್ತವಾಗುವುದರ ಜೊತೆಗೇ ಗೊಣಗಾಟಗಳೂ ಕೇಳಿ ಬಂದಿಎ.ಕಚೇರಿ, ಕಾಲೇಜುಗಳಿಗೆ ಹೋಗಲಾಗುತ್ತಿಲ್ಲವೇ ಎಂಬ ಬೇಸರ ಹಲವರಿಂದಕೇಳಿ ಬಂದಿವೆ.

ಇನ್ನೂ ಕೆಲ ಮಂದಿ ಮನೆಯಲ್ಲೇ ಉಳಿದು ಕುಟುಂಬದೊಂದಿಗೆ ಸಮಯ ಕಳೆಯುವುದನ್ನು ಆಸ್ವಾದಿಸುವುದಾಗಿ ಹೇಳಿಕೊಂಡಿದ್ದಾರೆ.

#LockdownExtended ಮತ್ತು #LockdownExtension ಅಡಿಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಮತ್ತು ಮೀಮ್‌ಗಳು ಇಲ್ಲಿವೆ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT