ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡ ಕೈದಿಗಳಿಗೆ ಆರ್ಥಿಕ ಸಹಾಯ’ ಯೋಜನೆ ಜಾರಿಗೆ ನಿರ್ಧಾರ: ಕೇಂದ್ರ

Last Updated 7 ಏಪ್ರಿಲ್ 2023, 14:15 IST
ಅಕ್ಷರ ಗಾತ್ರ

ನವದೆಹಲಿ: ಜಾಮೀನು ಮೊತ್ತ ಹಾಗೂ ದಂಡವನ್ನು ಪಾವತಿಸಲು ಸಾಧ್ಯವಾಗದ ಬಡ ಕೈದಿಗಳಿಗೆ ಆರ್ಥಿಕ ಸಹಾಯ ಒದಗಿಸುವ ‘ಬಡ ಕೈದಿಗಳಿಗೆ ಆರ್ಥಿಕ ಸಹಾಯ’ ಎನ್ನುವ ವಿಶೇಷ ಯೋಜನೆಯನ್ನು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕಾರಾಗೃಹಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳಿದ್ದಾರೆ. ಈ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ‘ಕಡಿಮೆ ಶಿಕ್ಷಣ ಹಾಗೂ ಕಡಿಮೆ ಆದಾಯ ಇರುವ ಸಮಾಜದ ತಳಸಮುದಾಯದ ಬಡ ಕೈದಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗುವುದು’ ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಹೇಳಿದೆ.

‘ಈ ಯೋಜನೆಯ ಲಾಭ ಪಡೆಯಲು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು. ‘ಇ–ಪ್ರಿಸನ್ಸ್‌’ ಪೋರ್ಟಲ್‌ ಅನ್ನು ಬಳಕೆದಾರಸ್ನೇಹಿ ಮಾಡಲಾಗುವುದು. ಜೊತೆಗೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳನ್ನು ಬಲಗೊಳಿಸಲಾಗುವುದು’ ಎಂದೂ ಸಚಿವಾಲಯ ಹೇಳಿದೆ.

‘ಬಡ ಕೈದಿಗಳಿಗೆ ಆರ್ಥಿಕ ಸಹಾಯ’ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಈ ವರ್ಷದ ಬಜೆಟ್‌ ಭಾಷಣದಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT