ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

Tomato Price | ಟೊಮೆಟೊ ಬೆಲೆ ಏರಿಕೆ ತಾತ್ಕಾಲಿಕ: ಕೇಂದ್ರ ಸರ್ಕಾರದ ಅಧಿಕಾರಿ

Published : 27 ಜೂನ್ 2023, 16:09 IST
Last Updated : 27 ಜೂನ್ 2023, 16:09 IST
ಫಾಲೋ ಮಾಡಿ
0
Tomato Price | ಟೊಮೆಟೊ ಬೆಲೆ ಏರಿಕೆ ತಾತ್ಕಾಲಿಕ: ಕೇಂದ್ರ ಸರ್ಕಾರದ ಅಧಿಕಾರಿ

ನವದೆಹಲಿ: ಟೊಮೆಟೊ ಬೆಲೆ ಏರಿಕೆಯು ಈ ಋತುವಿನ ತಾತ್ಕಾಲಿಕ ವಿದ್ಯಮಾನ. ಆದಷ್ಟು ಬೇಗ ಟೊಮೆಟೊ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT
ADVERTISEMENT

ದೇಶದಾದ್ಯಂತ ಟೊಮೆಟೊ ಬೆಲೆ ಏರಿಕೆ ಆಗಿದೆ. ಕೆಲ ಪ್ರಮುಖ ನಗರಗಳಲ್ಲಿ ಬೆಲೆಯು ₹100 ತಲುಪಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ವ್ಯವಹಾರಗಳ ಕಾರ್ಯದರ್ಶಿ ರೋಹಿತ್‌ ಕುಮರ್‌ ಸಿಂಗ್‌ ಅವರು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಟೊಮೆಟೊ ಬೇಗನೇ ಕೊಳೆಯುವಂಥ ತರಕಾರಿ. ಹಠಾತ್‌ ಆಗಿ ಮಳೆ ಬಂದ ಪ್ರದೇಶಗಳಲ್ಲಿ ಇದರ ಸಾಗಣೆಗೆ ತೊಂದರೆಯಾಗಿದೆ. ಇದು ತಾತ್ಕಾಲಿಕ ಸಮಸ್ಯೆ. ಪ್ರತಿವರ್ಷವೂ ಈ ಖುತುವಿನಲ್ಲಿ ಈ ಸಮಸ್ಯೆ ಸಾಮಾನ್ಯ’ ಎಂದು ಅವರು ಹೇಳಿದ್ದಾರೆ.

ಗ್ರಾಹಕರ ವ್ಯವಹಾರಗಳ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ, ಭಾರತದಲ್ಲಿ ಟೊಮೆಟೊ ದರದ ಸರಾಸರಿ 1 ಕೆ.ಜಿಗೆ ₹46 ಇದೆ. ದೆಹಲಿಯಲ್ಲಿ ಕೆ.ಜಿಗೆ ₹60, ಬೆಂಗಳೂರಿನಲ್ಲಿ ₹52, ಜಮ್ಮುವಿನಲ್ಲಿ ₹80, ಭುವನೇಶ್ವರದಲ್ಲಿ ₹100 ಇದೆ. ಕರ್ನಾಟಕದ ಬಳ್ಳಾರಿ, ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ₹122 ತಲುಪಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0