ನವದೆಹಲಿ (ಪಿಟಿಐ): ಥಾಯ್ಲೆಂಡ್ ತಂಡವನ್ನು 3–1 ರಿಂದ ಮಣಿಸಿದ ಭಾರತ ತಂಡ, ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಏಳನೇ ಸ್ಥಾನ ಪಡೆದುಕೊಂಡಿತು.

ಶನಿವಾರ ನಡೆದ ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಸಮರವೀರ್– ರಾಧಿಕಾ ಶರ್ಮಾ ಜೋಡಿ 11–21, 21–19, 21–18 ರಿಂದ ತನಕೊರ್ನ್ ಮೀಚಯ್– ಫಾಂಗ್‌ಫಾ ಕೊರ್ಪತಮಕಿತ್ ಅವರನ್ನು ಮಣಿಸಿತು.

ಆದರೆ ಬಾಲಕರ ಸಿಂಗಲ್ಸ್‌ನಲ್ಲಿ ತುಷಾರ್ ಸುವೀರ್ 19–21, 11–21 ರಿಂದ ನಚಕೊರ್ನ್ ಪುರ್ಸಿ ಕೈಯಲ್ಲಿ ಪರಾಭವಗೊಂಡರು. ಇದರಿಂದ ಪಂದ್ಯ 1–1 ರಲ್ಲಿ ಸಮಬಲ ಆಯಿತು.

ಬಾಲಕಿಯರ ಸಿಂಗಲ್ಸ್‌ನಲ್ಲಿ ತಾರಾ ಶಾ 21–15, 24–26, 21–12 ರಿಂದ ತೊರ್ನುರ್ ಸೆಹೆಂಗ್ ಅವರನ್ನು ಮಣಿಸಿ ಭಾರತಕ್ಕೆ 2–1 ಮೇಲುಗೈ ತಂದಿತ್ತರು. ಬಳಿಕ ನಡೆದ ಪುರುಷರ ಡಬಲ್ಸ್‌ನಲ್ಲಿ ದಿವ್ಯಂ ಅರೋರ– ಮಯಂಕ್ ರಾಣಾ ಜೋಡಿ 21–18, 21–19 ರಿಂದ ಸೊಂಗ್‌ಪೊನ್ ಸೆ ಮಾ– ಫರಿನತ್ ಸಾಯಿಕಮ ಅವರನ್ನು ಮಣಿಸಿ ಭಾರತದ ಗೆಲುವನ್ನು ಖಚಿತಪಡಿಸಿಕೊಂಡರು.

ವೈಯಕ್ತಿಕ ವಿಭಾಗದ ಸ್ಪರ್ಧೆಗಳು ಅ.2 ರಿಂದ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.