ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ಆತ್ಮಹತ್ಯೆ ತಡೆಗೆ ‘ಸ್ಪ್ರಿಂಗ್ ಫ್ಯಾನ್‌’ ತಂತ್ರ

Published 18 ಆಗಸ್ಟ್ 2023, 11:17 IST
Last Updated 18 ಆಗಸ್ಟ್ 2023, 11:17 IST
ಅಕ್ಷರ ಗಾತ್ರ

ಕೋಟಾ : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ತಾಣಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಸರಣಿಯಿಂದ ಚಿಂತೆಗೊಳಗಾಗಿರುವ ರಾಜಸ್ಥಾನದ ಕೋಟಾ ಜಿಲ್ಲಾಡಳಿತ, ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಸೀಲಿಂಗ್ ಫ್ಯಾನ್‌ಗಳಲ್ಲಿ ‘ಸ್ಪ್ರಿಂಗ್ ಸಾಧನ’ವನ್ನು (ಆತ್ಮಹತ್ಯಾ ವಿರೋಧಿ ಸಾಧನ) ಕಡ್ಡಾಯವಾಗಿ ಅಳವಡಿಸಲು ಹಾಸ್ಟೆಲ್‌ ಮಾಲೀಕರು ಮತ್ತು ಆಡಳಿತ ಮಂಡಳಿಗಳಿಗೆ ಆದೇಶಿಸಿದೆ. 

ಈ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ಹಾಸ್ಟೆಲ್ ಮಾಲೀಕರು ಮತ್ತು ಅವುಗಳ ಆಡಳಿತ ಮಂಡಳಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಕೋಟಾ ಜಿಲ್ಲಾಧಿಕಾರಿ ಒ.ಪಿ. ಬುನಕರ್‌ ಅವರು ಆಗಸ್ಟ್ 12 ರಂದು ‘ಆತ್ಮಹತ್ಯೆ-ವಿರೋಧಿ ಕ್ರಮ’ ಕುರಿತು ಜಿಲ್ಲೆಯ ಅಧಿಕಾರಿಗಳು ಮತ್ತು ತರಬೇತಿ ಕೇಂದ್ರಗಳು, ಹಾಸ್ಟೆಲ್‌ ಪ್ರಮುಖರ ಸಭೆ ನಡೆಸಿ, ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಈ ನಿರ್ದೇಶನ ಪಾಲಿಸಲು ಸೂಚಿಸಿದರು.

ಕೋಟಾದಲ್ಲಿ ಈ ವರ್ಷ ಇಲ್ಲಿಯವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಐಐಟಿ–ಜೆಇಇ, ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ತರಬೇತಿ ಕೇಂದ್ರಗಳಿಂದಾಗಿ ಕೋಟಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ತಾಣವಾಗಿದೆ. ಇಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕೆ ಎಂದು ನಿರ್ಧರಿಸುವ ಮೊದಲು ಪೋಷಕರು ತಮ್ಮ ಮಕ್ಕಳ ಸಾಮರ್ಥ್ಯವನ್ನು ವೃತ್ತಿಪರರ ನೆರವಿನ ಮೂಲಕ ನಿರ್ಣಯಿಸುವ ಅಗತ್ಯವೂ ಇದೆ ಎನ್ನುತ್ತಾರೆ ಎಂದು ಕೆಲವು ಪರಿಣತರು. 

ಈ ಸಾಧನದ ಕೆಲಸ: ಸೀಲಿಂಗ್‌ ಫ್ಯಾನ್‌ಗೆ ‘ಸ್ಪ್ರಿಂಗ್‌ ಡಿವೈಸ್‌’ ಜೋಡಿಸಿದ್ದಾಗ, ಅದು 20 ಕೆ.ಜಿ.ಗಿಂತ ಹೆಚ್ಚು ತೂಕದ ವಸ್ತು ನೇತುಬಿದ್ದರೆ ಹಿಗ್ಗುತ್ತದೆ. ಅದೇ ಸಮಯದಲ್ಲಿ ಸೈರನ್ ಮೊಳಗಿಸುತ್ತದೆ. ಈ ಡಿವೈಸ್‌ ಅಳವಡಿಸಿದ ಸೀಲಿಂಗ್‌ ಫ್ಯಾನ್‌ಗೆ ಯಾರೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT