ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕ್ಷುಬ್ಧಗೊಂಡಿದ್ದ ಶ್ರೀಶೈಲ ಸಹಜ ಸ್ಥಿತಿಯತ್ತ

ಭಕ್ತರು, ಸ್ಥಳೀಯರ ಘರ್ಷಣೆಯಿಂದ ಪ್ರಕ್ಷುಬ್ಧಗೊಂಡಿದ್ದ ಶ್ರೀಕ್ಷೇತ್ರ
Last Updated 1 ಏಪ್ರಿಲ್ 2022, 17:41 IST
ಅಕ್ಷರ ಗಾತ್ರ

ರಾಯಚೂರು/ ಕಲಬುರಗಿ: ಕರ್ನಾಟಕದ ಭಕ್ತರು ಹಾಗೂ ಸ್ಥಳೀಯ ವರ್ತಕರ ನಡುವಿನ ಘರ್ಷಣೆಯಿಂದಾಗಿ ಪ್ರಕ್ಷುಬ್ಧಗೊಂಡಿದ್ದ ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲದಲ್ಲಿ ಶುಕ್ರವಾರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.ನಿಷೇಧಾಜ್ಞೆ ತೆರವುಗೊಳಿಸಲಾಗಿದೆ.

‘ರಥಬೀದಿ ಸೇರಿದಂತೆ ದೇವಸ್ಥಾನದ ಸುತ್ತಮುತ್ತಲೂ ವ್ಯಾಪಾರಿಗಳು ಮಳಿಗೆಗಳನ್ನು ತೆರೆದಿದ್ದಾರೆ. ಪೂಜಾ ಸಾಮಗ್ರಿಗಳ ಮಾರಾಟ, ದೇವರ ದರ್ಶನ, ಅನ್ನದಾಸೋಹ ಸೇವೆ ಸುಗಮವಾಗಿ ನಡೆಯುತ್ತಿವೆ. ವಿವಿಧ ರಾಜ್ಯಗಳಿಂದ ಭಕ್ತರು ಬರುತ್ತಿದ್ದು, ಪ್ರತಿವರ್ಷ ಯುಗಾದಿ ದಿನ ಕಾಣುತ್ತಿದ್ದ ಜನದಟ್ಟಣೆ ಈ ವರ್ಷವೂ ಇದೆ‘ ಎಂದು ಪಂಚಾಚಾರ್ಯ ಮಠದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಗಾಯಾಳು ಚೇತರಿಕೆ: ‘ಬುಧವಾರ ನಡೆದಿದ್ದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಬಾಗಲಕೋಟೆ ಜಿಲ್ಲೆಯ ಯುವಕನಿಗೆ ಕರ್ನೂಲ್‌ ಆಸ್ಪತ್ರೆ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಹುತೇಕ ಚೇತರಿಸಿ
ಕೊಂಡಿದ್ದಾನೆ‘ ಎಂದು ಅಧಿಕಾರಿಗಳು ಹೇಳಿದ್ದಾರೆ. ಕ್ಷೇತ್ರದಲ್ಲಿ ಈಗ ಪರಿಸ್ಥಿತಿ ಶಾಂತವಾಗಿದೆ. ಜಾತ್ರೆಯಲ್ಲಿ ವಹಿವಾಟು ನಿರಾತಂಕವಾಗಿ ಸಾಗಿದೆ.‘ ಎಂದುಕಲಬುರಗಿ ಮತ್ತು ಶ್ರೀಶೈಲ ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಮಹಾ ರಥೋತ್ಸವ ಇಂದು: ಯುಗಾದಿ ಪಾಡ್ಯದ ದಿನವಾದ ಏ. 2ರ ಸಂಜೆ 6ಕ್ಕೆ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಮಹಾರಥೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT