ಹೈದರಾಬಾದ್: ಸುಡಾನ್ ದೇಶದ 62 ವರ್ಷ ವಯಸ್ಸಿನ ಮಹಿಳೆಯೊಬ್ಬರು ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೃತಪಟ್ಟಿದ್ದಾರೆ.

ಮೃತ ಮಹಿಳೆಯನ್ನು ಹೀಯೆಬಾ ಮೊಹಮ್ಮದ್ ತಾಹ ಅಲಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಮಾನ ನಿಲ್ದಾಣದ ಅಧಿಕಾರಿಗಳ ಮಾಹಿತಿ ಪ್ರಕಾರ, ‘ತಮ್ಮ ದೇಶಕ್ಕೆ ವಾಪಸ್ ಆಗಲು ಹೊರಟಿದ್ದ 62 ವರ್ಷದ ಮಹಿಳೆ, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಎಲ್ಲ ತಪಾಸಣೆಯನ್ನು ಮುಗಿಸಿ ವಿಮಾನ ಏರುವವರಿದ್ದರು. ಆದರೆ, ಬದರ್ ಏರ್‌ಲೈನ್ಸ್‌ನ J4-226/227 ವಿಮಾನದ ಬೋರ್ಡಿಂಗ್ ಗೇಟ್ ಬಳಿ ತೆರಳುತ್ತಿದ್ದಾಗಹೃದಯಾಘಾತವಾಗಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.

ವಿಮಾನವುಮಸ್ಕತ್–ಹೈದರಾಬಾದ್-ಸುಡಾನ್ ಮಾರ್ಗವಾಗಿಸಂಚರಿಸಲು ನಿಗದಿಯಾಗಿತ್ತು.

‘ಇಂದು ಬೆಳಿಗ್ಗೆ 7 ಗಂಟೆ ವೇಳೆಗೆ ಸುಡಾನ್ ಮಹಿಳೆ ಹೀಯೆಬಾ ಮೊಹಮ್ಮದ್ ತಾಹ ಅಲಿ ತಮ್ಮ ದೇಶಕ್ಕೆ ಮರಳಲುಗಾಲಿಕುರ್ಚಿಯ ಮೂಲಕ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ, ಬೋರ್ಡಿಂಗ್ ಗೇಟ್ ಬಳಿ ಕುಸಿದು ಬಿದ್ದರು. ತಕ್ಷಣ ಅವರನ್ನು ಅಪೋಲೊ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿದ್ದಾರೆ. ತಾಹ ಕ್ಯಾನ್ಸರ್ ರೋಗಿಯಾಗಿದ್ದು ಕಳೆದ ಏಳು ತಿಂಗಳಿನಿಂದ ಇಲ್ಲಿ ಬಂಜಾರ ಬೆಟ್ಟದ ವಿರಿಂಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು’ ಎಂದು ವಿಮಾನ ನಿಲ್ದಾಣದ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.