ನವದೆಹಲಿ: ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ಣ ವೇತನ ನೀಡುವುದರಿಂದ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಗಳ ಕುರಿತು ಒಂದು ವಾರದೊಳಗೆ ಉತ್ತರಿಸಲು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕೇಳಿದೆ.

ಲಾಕ್‌ಡೌನ್ ಸಮಯದಲ್ಲಿ ಸರ್ಕಾರದ ಕ್ರಮಗಳಿಂದ ಬಹಳಷ್ಟು ಜನರು ಸಂಕಷ್ಟಕ್ಕೀಡಾಗಿರುವುದರಿಂದಾಗಿ 'ಈ ವಿಷಯವನ್ನು ತುರ್ತಾಗಿ ಪರಿಗಣಿಸುವಂತೆ'ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಮಂಗಳವಾರ ಕೇಂದ್ರ ಸರ್ಕಾರವನ್ನು ಕೇಳಿದೆ.

ಲಾಕ್‌ಡೌನ್ ವೇಳೆಯಲ್ಲಿ ಸಂಪೂರ್ಣ ಪಾವತಿಗಳನ್ನು ಮಾಡಲು ಸಾಕಷ್ಟು ಹಣಕಾಸಿನ ಮೀಸಲು ಇಲ್ಲದಿರುವುದರಿಂದಾಗಿ ಕಾರ್ಮಿಕರ ವೇತನವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಕಂಪನಿಗಳ ಗುಂಪು ಈ ಅರ್ಜಿಯನ್ನು ಸಲ್ಲಿಸಿದ್ದವು.

ದೇಶವು ಎರಡು ತಿಂಗಳ ಸಂಪೂರ್ಣ ಲಾಕ್‌ಡೌನ್ ಪೂರ್ಣಗೊಳಿಸುವುದರೊಂದಿಗೆ, ಎಲ್ಲ ಕ್ಷೇತ್ರಗಳಾದ್ಯಂತ ವ್ಯವಹಾರಗಳು ಸಂಕಷ್ಟಕ್ಕೆ ಸಿಲುಕಿವೆ ಮತ್ತು ರಾತ್ರೋರಾತ್ರಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವಂತಾಯಿತು. ಪ್ರಧಾನಿ ಮೋದಿ ಅವರು ಲಾಕ್‌ಡೌನ್ ಘೋಷಿಸುವಾಗ, ಈ ಕಷ್ಟದ ಸಮಯದಲ್ಲಿ ನೌಕರರಿಗೆ ಉದ್ಯೋಗ ಭದ್ರತೆಯನ್ನು ಒದಗಿಸಿ ಎಂದು ಕಂಪನಿಗಳನ್ನು ಒತ್ತಾಯಿಸಿದ್ದರು.

ಮಾರ್ಚ್‌ನಲ್ಲಿ, ಉದ್ಯೋಗದಾತರು ಕಾರ್ಮಿಕರಿಗೆ ಪೂರ್ಣ ವೇತನವನ್ನು ಪಾವತಿಸುವುದು ಮತ್ತು ಅವರ ಉದ್ಯೋಗಗಳನ್ನು ರಕ್ಷಿಸುವುದನ್ನು ಕಡ್ಡಾಯಗೊಳಿಸುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಸಹಿ ಮಾಡಿದ ಆದೇಶವನ್ನು ಸರ್ಕಾರ ಅಂಗೀಕರಿಸಿತ್ತು.

ಲಾಕ್‌ಡೌನ್‌ನಿಂದಾಗಿ ಅವರು ತಿಂಗಳುಗಳಿಂದ ವ್ಯವಹಾರದಿಂದ ಹೊರಗುಳಿದಿದ್ದಾರೆ ಮತ್ತು ಹಣಕಾಸಿನ ಮೀಸಲು ಇಲ್ಲ. ಹೀಗಾಗಿಕಂಪನಿಗಳು ಎಲ್ಲಾ ಕಾರ್ಮಿಕರ ವೇತನವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಕೂಗು ಎದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.