ನವದೆಹಲಿ: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿಚಾರದಲ್ಲಿ ರಾಜ್ಯವನ್ನೇ ಗುರಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಮೂಲಕ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡಲೇ ಮಧ್ಯ ಪ್ರವೇಶಿಸಬೇಕು’ ಎಂದು ಬುಧವಾರ ಆಗ್ರಹಿಸಿದರು.

ನ್ಯಾಯಾಲಯದಲ್ಲಿ ಸ್ವತಃ ವಾದ ಮಂಡಿಸಿದ ಅವರು, ‘ಪಶ್ಚಿಮ ಬಂಗಾಳ ದಲ್ಲಿ ನಡೆಯುತ್ತಿರುವ ಎಸ್ಐಆರ್ ವೇಳೆ ಅನುಸರಿಸಲಾಗುತ್ತಿರುವ ಮಾನದಂಡಗಳನ್ನು ನೆರೆ ರಾಜ್ಯ ಅಸ್ಸಾಂನಲ್ಲಿ ಯಾಕೆ ಅನ್ವಯಿಸಲಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

ಮಮತಾ ಬ್ಯಾನರ್ಜಿ ಅವರ ಮೇಲ್ಮನವಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ಫೆಬ್ರುವರಿ 9ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋಗ ಹಾಗೂ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಆಧಿಕಾರಿಗೆ ನೋಟಿಸ್ ಜಾರಿ ಮಾಡಿತು.

ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಎಂ.ಪಂಚೋಲಿ ಕೂಡ ಈ ಪೀಠದಲ್ಲಿದ್ದಾರೆ. ಅಪರೂಪವೆಂಬಂತೆ ಹಾಗೂ ಇದೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿ ಯೊ ಬ್ಬರು ಖುದ್ದು ಹಾಜರಾಗಿ ವಾದ ಮಂಡನೆ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು.

ಮಮತಾ ಬ್ಯಾನರ್ಜಿ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರೂ, ಪೂರಕ ನಿವೇದನೆಗಳನ್ನು ಅರುಹಲು ಅವರಿಗೆ ಪೀಠವು ಅನುಮತಿ ನೀಡಿತು. ಅವರು ಫೆ.9ರಂದು ನ್ಯಾಯಾಲಯಕ್ಕೆ ಪುನಃ ಹಾಜರಾಗಿ, ವಾದ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ವಿಚಾರಣೆ ವೇಳೆ, ‘ಎಸ್ಐಆರ್ ಕುರಿತು ಚುನಾವಣಾ ಆಯೋಗಕ್ಕೆ ನಾನು 6 ಪತ್ರಗಳನ್ನು ಬರೆದಿರುವೆ. ನಮಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ಈ ಕಾರಣಕ್ಕೆ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವೆ’ ಎಂದು ಮಮತಾ ಬ್ಯಾನರ್ಜಿ ಹೇಳಿದರು.

‘ದೊಡ್ಡ ಸಂಖ್ಯೆಯ ಮತದಾರರ ಹೆಸರುಗಳ ಪರಿಷ್ಕರಣೆ ಹಾಗೂ ಹೊಂದಾಣಿಕೆ ಪ್ರಕ್ರಿಯೆ ಬಾಕಿ ಇದೆ. ಫೆಬ್ರುವರಿ 14ರ ಒಳಗಾಗಿ ಈ ಕಾರ್ಯ ಪೂರ್ಣಗೊಳ್ಳಬೇಕಿರುವ ಕಾರಣ, ನೈಜ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗುವ ಅಪಾಯ ಇದೆ’ ಎಂದು ವಕೀಲ ದಿವಾನ್ ಹೇಳಿದರು.

‘ಚುನಾವಣಾ ಆಯೋಗವು 1.36 ಕೋಟಿ ಮತದಾರರಿಗೆ ನೋಟಿಸ್ ನೀಡಿದೆ. ಈ ಮತದಾರರಿಗೆ ಸಂಬಂಧಿಸಿ ‘ಹೆಸರು ಹೊಂದಾಣಿಕೆ ಸಮಸ್ಯೆ’ ಕಾರಣಗಳಿಂದಾಗಿ ನೋಟಿಸ್ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ. ಹೆಸರಿನಲ್ಲಿನ ವ್ಯತ್ಯಾಸಗಳಿಗಾಗಿ ಹೆಚ್ಚು ಜನರಿಗೆ ನೋಟಿಸ್ ನೀಡಲಾಗಿದೆ. ಆದರೆ, ಈ ದೋಷಗಳನ್ನು ಸುಲಭವಾಗಿ ಸರಿಪಡಿಸಲು ಸಾಧ್ಯವಿದೆ’ ಎಂದು ದಿವಾನ್ ವಾದಿಸಿದರು.

ಎಸ್ಐಆರ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಪಶ್ಚಿಮ ಬಂಗಾಳ ಜನರ ಹಕ್ಕುಗಳನ್ನು ರಕ್ಷಿಸಬೇಕು. ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಬೇಕು.
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಬಂಗಾಳಿ ಹಾಗೂ ಅದರ ಉಪ ಭಾಷೆಯೊಂದನ್ನು ಉಲ್ಲೇಖಿಸಿದ ಸಿಜೆಐ ಸೂರ್ಯಕಾಂತ್, ಭಾಷೆಯಲ್ಲಿನ ಈ ವ್ಯತ್ಯಾಸದಿಂದಾಗಿ ಹೆಸರಿನಲ್ಲಿ ತಪ್ಪು ನುಸುಳಿರಬಹುದು ಎಂದರು.

‘ಈಗ ನಡೆಯುತ್ತಿರುವ ಎಸ್ಐಆರ್ ವೇಳೆ ವಲಸೆಯನ್ನೂ ಪರಿಗಣಿಸಲಾಗುತ್ತಿದೆ. ಆದಾಗ್ಯೂ, ಮತದಾರರ ಪಟ್ಟಿಯಿಂದ ನೈಜ ಮತದಾರರ ಹೆಸರು ಕೈಬಿಟ್ಟು ಹೋಗಬಾರದು’ ಎಂದು ಹೇಳಿದರು.

‘ಎಸ್ಐಆರ್ ಭಾಗವಾಗಿ ಆಧಾರ್ ಹಾಗೂ ಇತರ ದಾಖಲೆಗಳನ್ನು ಚುನಾವಣಾ ಆಯೋಗ ಪರಿಗಣಿಸುತ್ತಿಲ್ಲ. ಎಷ್ಟೋ ಜನರು ಜೀವಂತವಾಗಿದ್ದಾರೆ. ಆದರೆ, ಅವರು ಮೃತಪಟ್ಟಿದ್ದಾಗಿ ಘೋಷಿಸಲಾಗಿದೆ’ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

ಇದಕ್ಕೆ ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ‘ರಾಜ್ಯ ಸರ್ಕಾರ ಗ್ರೇಡ್–2 ಶ್ರೇಣಿಯ 80 ಅಧಿಕಾರಿಗಳನ್ನು ಒದಗಿ ಸಿದೆ. ಅಂಗನವಾಡಿ ಕಾರ್ಯಕರ್ತರಂತಹ ಕೆಳ ಹಂತದ ನೌಕರರನ್ನು ಪರಿಷ್ಕರಣೆ ಕಾರ್ಯಕ್ಕೆ ಒದಗಿಸಿದೆ’ ಎಂದರು.

‘ಚುನಾವಣಾ ಆಯೋಗ ಕೇಳಿದಂತೆಯೇ, ಎಸ್ಐಆರ್ ಕಾರ್ಯಕ್ಕೆ ಸಿಬ್ಬಂದಿಯನ್ನು ಒದಗಿಸಲಾಗಿದೆ’ ಎಂದು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದರು.
.ಲೇ ಆರೆಸ್ಸೆಸ್ನವ್ರಾ ...ಥೂ ನಿಮ್ಮ... ಯಾಕೆ ಕೂಗಾಡ್ತೀರಿ: ಶಾಸಕ ಶಿವಲಿಂಗೇಗೌಡ.SIR: ಅರ್ಹ ವ್ಯಕ್ತಿಗಳು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು–ಸುಪ್ರೀಂ ಕೋರ್ಟ್.
ಮಮತಾ ಬ್ಯಾನರ್ಜಿ ವಾದ

ಚುನಾವಣಾ ಆಯೋಗವು ‘ವಾಟ್ಸ್ಆ್ಯಪ್ ಆಯೋಗ’ ಎಂಬಂತಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳ ಸರ್ಕಾರಿ ನೌಕರರನ್ನು ‘ಸೂಕ್ಷ್ಮ ವೀಕ್ಷಕ’ರನ್ನಾಗಿ ನಿಯೋಜನೆ ಮಾಡಲಾಗಿದೆ

24 ವರ್ಷಗಳ ಬಳಿಕ ಎಸ್ಐಆರ್ ಕೈಗೊಳ್ಳಲಾಗಿದ್ದು, ಇದನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಅವಸರವೇನಿದೆ?

ಸೂಕ್ಷ್ಮ ವೀಕ್ಷಕರು ಕಚೇರಿಯಲ್ಲಿ ಇದ್ದುಕೊಂಡೇ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಬಹುದಾಗಿದೆ. ತಮ್ಮ ಹೆಸರು ಕೈಬಿಡಲಾದವರಿಗೆ ಅರ್ಜಿ ನಮೂನೆ–6 ಸಲ್ಲಿಸಲು ಅವಕಾಶ ನೀಡುತ್ತಿಲ್ಲ

ಎಸ್ಐಆರ್ ಮೊದಲ ಹಂತದಲ್ಲಿ 56 ಲಕ್ಷ, ಎರಡನೇ ಹಂತದಲ್ಲಿ 1.30 ಕೋಟಿ ಹೆಸರುಗಳನ್ನು ಕೈಬಿಡಲಾಗಿದೆ. ಮೊದಲ ಹಂತದಲ್ಲಿ ಹೆಸರು ಕೈಬಿಟ್ಟು ಹೋದವರಿಗೆ ನಮೂನೆ– 6 ಸಲ್ಲಿಸಲು ಅವಕಾಶ ನೀಡಿಲ್ಲ

ಮಮತಾ ಬೇಡಿಕೆಗಳೇನು?

ಎಸ್ಐಆರ್ ನಡೆಸುವ ಕುರಿತು ಚುನಾವಣಾ ಆಯೋಗ 2025ರ ಜೂನ್ 24 ಹಾಗೂ ಅಕ್ಟೋಬರ್ 27ರಂದು ಹೊರಡಿಸಿರುವ ಆದೇಶಗಳನ್ನು ರದ್ದುಗೊಳಿಸಬೇಕು

ಅರ್ಜಿಗಳ ಪರಿಶೀಲನಾ ಜವಾಬ್ದಾರಿಯಿಂದ ಸೂಕ್ಷ್ಮ ವೀಕ್ಷಕರನ್ನು ಮುಕ್ತಗೊಳಿಸಬೇಕು

ಅಂತರರಾಜ್ಯ ವಲಸೆ ಪ್ರಕರಣಗಳ ಇತ್ಯರ್ಥಕ್ಕಾಗಿ ಸ್ಥಳೀಯ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (ಇಆರ್ಒ) ಅಧಿಕಾರ ನೀಡಬೇಕು

ರಾಜ್ಯ ಸರ್ಕಾರ ನೀಡಿರುವ ದಾಖಲೆಗಳನ್ನು ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು

.ಹೊಸ ವಂಟಮುರಿಯಲ್ಲಿ ಮಹಿಳೆ ವಿವಸ್ತ್ರ ಪ್ರಕರಣ: 12 ಮಂದಿಗೆ 5 ವರ್ಷ ಕಠಿಣ ಶಿಕ್ಷೆ.U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ.
ಮುಗಿಬಿದ್ದ ವಕೀಲರು, ದಾವೆದಾರರು...

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖುದ್ದು ಹಾಜರಾಗಿ ವಾದ ಮಂಡಿಸುತ್ತಿದ್ದುದನ್ನು ನೋಡುವುದಕ್ಕಾಗಿ ಸಿಜೆಐ ಅವರ ನ್ಯಾಯಾಲಯ ಸಭಾಂಗಣದಲ್ಲಿ ಬಹಳ ಜನ ವಕೀಲರು ಹಾಗೂ ದಾವೆದಾರರು ಮುಗಿಬಿದ್ದಿದ್ದ ದೃಶ್ಯ ಕಂಡುಬಂತು.

ಬಿಳಿ ಬಣ್ಣದ ಸೀರೆ ಉಟ್ಟು, ಕಪ್ಪು ಬಣ್ಣದ ಸ್ಕಾರ್ಫ್ ಧರಿಸಿದ್ದ ಮಮತಾ ಬ್ಯಾನರ್ಜಿ, ತಮ್ಮ ವಕೀಲರೊಂದಿಗೆ ಬೆಳಿಗ್ಗೆ 10ಕ್ಕೆ ಸುಪ್ರೀಂ ಕೋರ್ಟ್ ಗೇಟ್ ತಲುಪಿದ್ದರು. ಅವರೊಂದಿಗೆ ಟಿಎಂಸಿ ಸಂಸದರೂ ಆದ ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ ಇದ್ದರು.

ಸುಪ್ರೀಂ ಕೋರ್ಟ್ ಪ್ರವೇಶಿಸುವುದಕ್ಕೆ ಅವರು ರಿಜಿಸ್ಟ್ರಿಯಿಂದ ಈ ಮೊದಲೇ ಅನುಮತಿ ಪಡೆದಿದ್ದರು ಎಂದು ಮೂಲಗಳು ಹೇಳಿವೆ.

ಅವರು ಪ್ರವೇಶಿಸುತ್ತಿದ್ದಂತೆಯೇ ಮಾಧ್ಯಮ ಪ್ರತಿನಿಧಿಗಳು ಹಲವು ಪ್ರಶ್ನೆಗಳನ್ನು ಕೇಳಿದರು. ಆದರೆ, ಅವರು ಉತ್ತರಿಸಲಿಲ್ಲ. ನಂತರ ಅವರು, ಸಭಾಂಗಣ ಪ್ರವೇಶಿಸಿ, ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತುಕೊಂಡರು. ಬಳಿಕ, ಮಧ್ಯಾಹ್ನ 12.55ರ ಹೊತ್ತಿಗೆ, ವಕೀಲರಿಗಾಗಿ ಮೀಸಲಿರುವ ಮೊದಲ ಸಾಲಿನಲ್ಲಿ ಕುಳಿತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.