ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#MeToo: ತಮಿಳು ಚಿತ್ರ ಸಾಹಿತಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪ

Last Updated 9 ಅಕ್ಟೋಬರ್ 2018, 10:30 IST
ಅಕ್ಷರ ಗಾತ್ರ

ಚೆನ್ನೈ: ಮಿಟೂ ಆನ್‍ಲೈನ್ ಚಳವಳಿಯಲ್ಲಿ ಹಳೆಯ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮರುಜೀವ ಪಡೆದುಕೊಳ್ಳುತ್ತಿದೆ.ಇದೀಗ ತಮಿಳು ಚಿತ್ರ ಸಾಹಿತಿ ವೈರಮುತ್ತು ವಿರುದ್ದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬಳು ಪತ್ರಕರ್ತೆ ಸಂಧ್ಯಾ ಮೆನನ್‍ಗೆ ಸಂದೇಶ ಕಳಿಸಿ ವೈರಮುತ್ತು ಪ್ರಕರಣವನ್ನು ಬಹಿರಂಗ ಪಡಿಸಿದ್ದಾರೆ.

ವೈರಮುತ್ತು ಅವರ ಪ್ರಾಜೆಕ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಮಹಿಳೆ ದೂರಿದ್ದಾಳೆ . ಆಕೆಗೆ ಆಗ 18 ವರ್ಷ.
ಚಿತ್ರಗೀತೆಯೊಂದರ ಬಗ್ಗೆ ಚರ್ಚೆ ನಡೆಸಲು ಬಂದ ವೈರಮುತ್ತು ತನ್ನನ್ನು ಅಪ್ಪಿ ಮುತ್ತು ನೀಡಿದ್ದಾರೆ.ಆ ಹೊತ್ತಿನಲ್ಲಿ ನನಗೇನು ಮಾಡಬೇಕು ಎಂದು ತಿಳಿದಿಲ್ಲ.ನಾನು ಓಕೆ ಸರ್, ಥ್ಯಾಂಕ್ಯೂ ಎಂದು ಅವರ ಮನೆಯಿಂದ ಹೊರಗೆ ಓಡಿದ್ದೆ. ಚೆನ್ನೈ ನ ಕೊಡಂಬಕ್ಕಂ ಎಂಬಲ್ಲಿ ವೈರಮುತ್ತು ಅವರ ಮನೆಯಲ್ಲಿ ಈ ಘಟನೆ ನಡೆದಿತ್ತುಈ ಘಟನೆ ನಡೆದ ನಂತರ ತಾನು ಒಂಟಿಯಾಗಿ ಆತನ ಕೈಗೆ ಸಿಗದಂತೆ ಗುಂಪಿನಲ್ಲೇ ಓಡಾಡುತ್ತಿದ್ದೆ.ವೈರಮುತ್ತು ಅವರಿಗೆ ರಾಜಕೀಯ ಕೈವಾಡ ಇರುವುದರಿಂದ ಅವರು ಸಂತ್ರಸ್ತರನ್ನು ಬಾಯ್ಮುಚ್ಚಿಸುತ್ತಾರೆ ಎಂದು ಮಹಿಳೆ ಹೇಳಿದ್ದಾರೆ.
ಸಂಧ್ಯಾ ಅವರ ಟ್ವೀಟ್‍ನ್ನು ರೀಟ್ವೀಟ್ ಮಾಡಿದ ಗಾಯಕಿ ಚಿನ್ಮಯಿ, ಸಿನಿಮಾ ರಂಗಕ್ಕೆ ಗೊತ್ತು, ಗಂಡಸರಿಗೂ ಗೊತ್ತು, ಸಮಯ ಮೀರಿದೆ ಎಂದು ಬರೆದಿದ್ದಾರೆ.

ಸಂಧ್ಯಾ ಅವರು ಈ ಟ್ವೀಟ್ ಮಾಡಿದ ನಂತರ ಚಿನ್ಮಯಿ ಅವರು ವೈರಮುತ್ತು ಮೇಲಿರುವ ಇನ್ನೊಂದು ಆರೋಪವನ್ನು ಟ್ವೀಟಿಸಿದ್ದಾರೆ.
ಸಂಧ್ಯಾ ಮೆನನ್ ಅವರೇ ಇನ್ನೊಂದು ಟ್ವೀಟ್ ಮಾಡಿದ್ದು, ಅದರಲ್ಲಿ ವೈರಮುತ್ತು ಅವರು ಸೀತಮ್ಮಲ್ ಕಾಲನಿಯಲ್ಲಿರುವ ಮನೆಯಲ್ಲಿ ಬಾಲಿಗಿಗೆ ಚಿಲಕ ಹಾಕಿ ಮಹಿಳೆಯೊಬ್ಬರನ್ನು ಮುಟ್ಟಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.

ಈ ಆರೋಪದ ಬಗ್ಗೆ ತಮಿಳು ಸಿನಿಮಾರಂಗ ಮೌನ ವಹಿಸಿದ್ದರೂ ನಟಿ ಸಮಂತಾ ಮತ್ತು ವರಲಕ್ಷ್ಮಿ ಶರತ್ ಕುಮಾರ್ ಮಿಟೂ ಚಳುವಳಿಗೆ ದನಿದೂಡಿಸಿದ್ದಾರೆ.

ಲಿಂಗ ತಾರತಮ್ಯದ ಬಗ್ಗೆ ದನಿಯೆತ್ತಿದ್ದ ಸಮಂತಾ, ಮಿಟೂ ಚಳವಳಿಗೆ ಮಹಿಳೆಯರಿಂದ ಹೆಚ್ಚಿನ ಪ್ರತಿಕ್ರಿಯೆ ಬರುತ್ತಿರುವುದು ಖುಷಿ ನೀಡಿದೆ. ಈ ಧೈರ್ಯ ಮೆಚ್ಚುವಂತದ್ದು, ಈ ಪ್ರಕರಣಗಳಲ್ಲಿ ಕೆಲವು ಮಹಿಳೆಯರೇ ಮಹಿಳೆಯರನ್ನು ಪ್ರಶ್ನಿಸಿ, ಅವರನ್ನೇ ಸಂಶಯದಿಂದ ನೋಡುತ್ತಿರುವುದರ ಬಗ್ಗೆ ನನಗೆ ಮರುಕವಿದೆ.ನಮ್ಮ ಈ ದನಿಯಿಂದಾಗಿ ನಾವು ಹಲವಾರು ಚಿಕ್ಕ ಮಕ್ಕಳನ್ನು ರಕ್ಷಿಸುತ್ತಿದ್ದೇವೆ.ನಾನು #MeTooIndia ಚಳವಳಿಯನ್ನು ಬೆಂಬಲಿಸುತ್ತಿದ್ದೇನೆ ಎಂದು ಟ್ವೀಟಿಸಿದ್ದಾರೆ.

It’s alarming to hear the number of #metoo stories.They say it’s better late than never.Thank you to all the women that r being so strong to come out with their stories I stood up last year #metoo I urge every woman affected to stand up,we need to fight for our rights #TimesUp pic.twitter.com/5EgWmTTCxL

ಈ ಎಲ್ಲ ಕತೆಗಳು ಎಚ್ಚರದ ಕರೆಗಂಟೆಗಳಾಗಿವೆ. ಕಳೆದ ವರ್ಷವೇ ತಾನು #MeToo ಚಳವಳಿಗೆ ದನಿಗೂಡಿಸಿದ್ದೆ. ಜನರು ಈ ರೀತಿ ಮಾತನಾಡಲು ಮುಂದೆ ಬರಬೇಕು ಎಂದು ನಟಿ ವರಲಕ್ಷ್ಮಿ ಶರತ್ ಕುಮಾರ್ ಟ್ವೀಟಿಸಿದ್ದಾರೆ.

ಇದನ್ನೂ ಓದಿ

ಅಂದಹಾಗೆ ವೈರಮುತ್ತು ಅವರ ವಿರುದ್ಧ ಚಿನ್ಮಯಿ ಟ್ವೀಟ್ ದಾಳಿ ನಡೆಸಿದ್ದನ್ನು ನೋಡಿದ ಟ್ವೀಟರಾತಿಗಳು ತಾವು ಇನ್ನು ಮುಂದೆ ವೈರಮುತ್ತು ಅವರ ಜತೆ ಕೆಲಸ ಮಾಡಲು ಇಚ್ಛಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಚಿನ್ಮಯಿ, ನಾನು ಒರು ದೈವಂ ತಂದ ಪೂವೇ (ಚಿನ್ಮಯಿ ಅವರ ಮೊದಲ ಗೀತೆ ) ಮತ್ತು ಸರ ಸರ ಸರ ಹಾಡು (ಇವೆರಡೂ ವೈರಮುತ್ತು ಅವರು ಬರೆದ ಚಿತ್ರಗೀತೆಗಳಾಗಿವೆ) ಹಾಡುತ್ತೇನೆ ಎಂದಿದ್ದಾರೆ.ಈಗಿನ ಕಾಲದಲ್ಲಿ ಗಾಯಕರು ಚಿತ್ರ ಸಾಹಿತಿಯೊಂದಿಗೆ ಆಪ್ತವಾಗಿ ಬೆರತು ಕೆಲಸ ಮಾಡಲೇ ಬೇಕೆಂದಿಲ್ಲ. ಅವರು ಅವರ ಕೆಲಸ ಮಾಡುತ್ತಾರೆ, ನಾವು ನಮ್ಮ ಕೆಲಸ. ನಾನು ಅವರು ಬರೆದಹಾಡನ್ನು ಹಾಡಬಾರದು ಎಂದು ವೈರಮುತ್ತು ಅವರೇ ಹೇಳಲಿ ಎಂದಿದ್ದಾರೆ.

ನಟ ರಾಧಾ ರವಿ ವಿರುದ್ಧವೆದ್ದಿರುವ ಲೈಂಗಿಕ ಕಿರುಕುಳ ಆರೋಪದ ಸ್ಕ್ರೀನ್ ಶಾಟ್ ಅನ್ನೂ ಚಿನ್ಮಯಿ ಶೇರ್ ಮಾಡಿದ್ದಾರೆ.

ಅಲ್ವಾರ್ ಪೇಟೆಯಲ್ಲಿರುವ ಮನೆಯಲ್ಲಿ ರಾಧಾ ರವಿ ಅವರು ತಮಗೆ ಕಿರುಕುಳ ನೀಡಿದ್ದರು ಎಂದು ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.

ಚಿನ್ಮಯಿ ಅವರಿಗೆ ಬೆಂಬಲ ಸೂಚಿಸಿದ ಪತಿ ರಾಹುಲ್ ರವೀಂದ್ರನ್, ನಾನೊಬ್ಬ ನಟ ಮತ್ತು ನಿರ್ದೇಶಕನಾಗಿದ್ದೇನೆ. ನಾನು ನಿನಗೆ ಬೆಂಬಲ ಸೂಚಿಸುತ್ತೇನೆ, ನಿನ್ನೊಂದಿಗೆ ಕೆಲಸ ಮುಂದುವರಿಸುತ್ತೇನೆ, ಅದನ್ನು ತಡೆಯಲು ವೈರಮುತ್ತುವಿಗೆ ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT