ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡು ವಿಧಾನಸಭೆ: ವಿರೋಧ ಪಕ್ಷದ ನಾಯಕ ಸೇರಿ AIADMK ಶಾಸಕರು ಅಮಾನತು

Published 26 ಜೂನ್ 2024, 5:28 IST
Last Updated 26 ಜೂನ್ 2024, 5:28 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಇತರ ಎಐಎಡಿಎಂಕೆ ಶಾಸಕರನ್ನು ಕಲಾಪದ ಉಳಿದ ಅವಧಿಗೆ ಸದನದಿಂದ ಅಮಾನತುಗೊಳಿಸಿ ಸ್ಪೀಕರ್ ಆದೇಶಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಎಐಎಡಿಎಂಕೆ ಶಾಸಕರನ್ನು ಸದನದಿಂದ ಹೊರಹಾಕಲು ಸ್ಪೀಕರ್‌ ಎಂ. ಅಪ್ಪಾವು ಅವರು ಸೂಚಿಸಿದ ಬೆನ್ನಲ್ಲೇ, ಅಮಾನತು ಕೂಡ ಮಾಡಲಾಗಿದೆ. ಕಲಾಪದ ಉಳಿದ ಅವಧಿಯಿಂದ ಶಾಸಕರನ್ನು ಅಮಾನತು ಮಾಡುವ ಗೊತ್ತುವಳಿಗೆ ವಿಧಾನಸಭೆ ಅಂಗೀಕಾರ ನೀಡಿದೆ.

ಪ್ರಶ್ನೋತ್ತರ ಅವಧಿಯನ್ನು ರದ್ದು ಮಾಡಿ, 60ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಕಲ್ಲಕುರುಚ್ಚಿ ಕಳ್ಳ ಭಟ್ಟಿ ದುರಂತದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಎಐಎಡಿಂಎಕೆ ಶಾಸಕರು ಗದ್ದಲ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT