ಶಿಮ್ಲಾ: ಹದಿಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಶಿಮ್ಲಾದ ಗ್ರಾಮ ಪಂಚಾಯಿತಿ ಮುಖ್ಯಸ್ಥನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆರೋಪಿ ಕಿಶೋರಿ ಲಾಲ್, ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಸೆಪ್ಟೆಂಬರ್ 21ರಂದು ತಡೆದು, ಆಕೆ ಧರಿಸಿದ್ದ ‘ರುದ್ರಾಕ್ಷಿ ಮಾಲೆ’ ಕುರಿತು ವಿಚಾರಿಸಿದ್ದಾನೆ.

ಬಳಿಕ, ತನಗೆ ತಂತ್ರ–ಮಂತ್ರ ತಿಳಿದಿದೆ. ಮಂತ್ರಗಳಿಂದ ಮಾಲೆಯನ್ನು ಪವಿತ್ರಗೊಳಿಸಬೇಕು. ಇಲ್ಲದಿದ್ದರೆ ಕುಟುಂಬದ ಸದಸ್ಯರು ಸಾವಿಗೀಡಾಗುತ್ತಾರೆ ಎಂದು ಹೇಳಿ ಬಾಲಕಿಯನ್ನು ಅಕ್ಟೋಬರ್ 15 ಮತ್ತು 17ರಂದು ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿ ವಿರುದ್ಧ ಭಾರತೀಯ ನೀತಿ ಸಂಹಿತೆ ಸೆಕ್ಷನ್ 65 ಮತ್ತು ಪೋಕ್ಸೊ ಕಾಯ್ದೆಯಾಡಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.