ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಧಾರಿತ ವಾಯುನೆಲೆ ನಿರ್ಮಾಣ: BRO

Published 7 ಸೆಪ್ಟೆಂಬರ್ 2023, 5:08 IST
Last Updated 7 ಸೆಪ್ಟೆಂಬರ್ 2023, 5:08 IST
ಅಕ್ಷರ ಗಾತ್ರ

ಜಮ್ಮು: ಗಡಿ ರಸ್ತೆ ಸಂಸ್ಥೆಯು (The Border Roads Organisation) ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಮಾರು ₹218 ಕೋಟಿ ವೆಚ್ಚದಲ್ಲಿ ಸುಧಾರಿತ ವಾಯುನೆಲೆಯನ್ನು ನಿರ್ಮಿಸಲು ಮುಂದಾಗಿದೆ.

ಈ ಯೋಜನೆಗೆ ಸೆ.12 ರಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಶಂಕುಸ್ಥಾಪನೆ ಮಾಡಲಿದ್ದಾರೆ.

ನ್ಯೋಮಾ ಸುಧಾರಿತ ಲ್ಯಾಂಡಿಂಗ್‌ ನೆಲೆಯು ಸೇನಾ ಯೋಧರು ಮತ್ತು ಸೇನಾ ವಸ್ತುಗಳನ್ನು ಸಾಗಿಸಲು ಸಹಾಯಕವಾಗಲಿದೆ. ಇದನ್ನು ಚೀನಾದ ನಿಜ ಗಡಿ ನಿಯಂತ್ರಣ ರೇಖೆಯಿಂದ 46 ಕಿಮೀ ದೂರದಲ್ಲಿ ನಿರ್ಮಿಸಲಾಗುತ್ತಿದೆ.

ರಕ್ಷಣಾ ಸಚಿವರು ಸೆ. 12 ರಂದು ಲಡಾಖ್‌ನ ನ್ಯೋಮಾ ವಾಯುನೆಲೆಗೆ ಇ– ಶಿಲಾನ್ಯಾಸ ನಡೆಸಲಿದ್ದಾರೆ ಎಂದು ಭದ್ರತಾ ಪಡೆಯ ಪಿಆರ್‌ಒ ತಿಳಿಸಿದ್ದಾರೆ.

ಏರ್‌ಫೀಲ್ಡ್‌ ನಿರ್ಮಾಣದಿಂದ ಲಡಾಖ್‌ನಲ್ಲಿ ವಾಯುಪಡೆಯ ಮೂಲಸೌಕರ್ಯ ಮತ್ತು ಉತ್ತರ ಗಡಿ ಭಾಗದಲ್ಲಿ ಭಾರತೀಯ ವಾಯು ಸೇನೆಯ ಬಲ ವೃದ್ಧಿಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಇದರ ಜತೆಗೆ ರಾಜನಾಥ್‌ ಸಿಂಗ್‌ ಅವರು ಗಡಿ ರಸ್ತೆ ಸಂಸ್ಥೆ ₹2,941 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 90 ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT