ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಣೆ | ಎನ್‌ಸಿಪಿಯ ಮಾಜಿ ಕಾರ್ಪೋರೇಟರ್ ಅಂದೇಕರ್ ಹತ್ಯೆ: ಮೂವರ ಬಂಧನ

Published : 2 ಸೆಪ್ಟೆಂಬರ್ 2024, 6:32 IST
Last Updated : 2 ಸೆಪ್ಟೆಂಬರ್ 2024, 6:32 IST
ಫಾಲೋ ಮಾಡಿ
Comments

ಪುಣೆ: ಎನ್‌ಸಿಪಿಯ ಮಾಜಿ ಕಾರ್ಪೊರೇಟರ್ ವನರಾಜ್ ಅಂದೇಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ರಾತ್ರಿ 9:30ರ ಸುಮಾರಿಗೆ ನಾನಾ ಪೇಟ್ ಪ್ರದೇಶದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡ ಅಂದೇಕರ್ ಅವರ ​​ಮೇಲೆ ದಾಳಿ ನಡೆಸಿತ್ತು. ಕೆಲವು ಸುತ್ತು ಗುಂಡು ಹಾರಿಸಿದ ಮೇಲೆ ಹರಿತವಾದ ಆಯುಧಗಳಿಂದ ಅಂದೇಕರ್‌ ಅವರ ಕುತ್ತಿಗೆ ಮತ್ತು ತಲೆಯ ಮೇಲೆ ಹಲ್ಲೆ ನಡೆಸಿದ್ದರು.

‘ಅಂದೇಕರ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ತಲೆ ಮತ್ತು ಕುತ್ತಿಗೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದು, ಅದರಿಂದ ಅವರು ಮೃತಪಟ್ಟಿರುವ ಸಾಧ್ಯತೆಯಿದೆ. ಮೃತರ ಅಂಗಿಯಲ್ಲಿ ಖಾಲಿ ಕಾರ್ಟ್ರಿಡ್ಜ್ ಕಂಡುಬಂದಿದೆ’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರವೀಣ್ ಪಾಟೀಲ್ ಹೇಳಿದ್ದಾರೆ.

ದಾಳಿಯ ಹಿಂದೆ ಸಂಬಂಧಿಕರ ಪಾತ್ರವಿದೆ ಎಂದು ಶಂಕಿಸಿ ಅಂದೇಕರ್ ​​ಅವರ ಕುಟುಂಬ ಸದಸ್ಯರು ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT