ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧ ಟಿಎಂಸಿ ಗೂಂಡಾಗಿರಿ ಆರೋಪ

Published 13 ಏಪ್ರಿಲ್ 2024, 12:11 IST
Last Updated 13 ಏಪ್ರಿಲ್ 2024, 12:11 IST
ಅಕ್ಷರ ಗಾತ್ರ

ಕೋಲ್ಕತ್ತ: ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್‌(ಟಿಎಂಸಿ) ನಡುವೆ ಇದೀಗ ವಿವಾದ ಭುಗಿಲೆದಿದ್ದು, ಕಾಂಗ್ರೆಸ್ ಹಿರಿಯ ನಾಯಕ, ಬಹರಾಂಪುರ ಸಂಸದ ಅಧೀರ್ ರಂಜನ್ ಚೌಧರಿ ವಿರುದ್ಧ ಟಿಎಂಸಿ ಗೂಂಡಾಗಿರಿ ಆರೋಪ ಮಾಡಿದೆ.

ಈ ಕುರಿತಂತೆ ವಿಡಿಯೊವೊಂದನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಟಿಎಂಸಿ, ಅಧೀರ್ ರಂಜನ್‌ ಚೌಧರಿ ಅವರಿಂದ ಗೂಂಡಾಗಿರಿ ಪ್ರದರ್ಶನ ಎಂದು ಬರೆದುಕೊಂಡಿದೆ.

‘ಬಹರಾಂಪುರದಲ್ಲಿ ನಿಮ್ಮ ದುಷ್ಕೃತ್ಯಗಳು ಗಮನಕ್ಕೆ ಬರುವುದಿಲ್ಲ ಎಂದುಕೊಂಡಿದ್ದೀರಾ? ಚುನಾವಣೆಯಲ್ಲಿ ಸೋಲುವ ಭಯ ಕಾಡಿದೆ ಎಂದು ನಿಮ್ಮ ನಡೆಗಳಿಂದಲೇ ಸ್ಪಷ್ಟವಾಗುತ್ತಿದೆ. ನಮ್ಮ ಕಾರ್ಯಕರ್ತರ ಎದುರು ಗೂಂಡಾಗಿರಿ ಪ್ರದರ್ಶಿಸುವುದರಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ’ ಎಂದು ಟಿಎಂಸಿ ಬರೆದುಕೊಂಡಿದೆ.

ಇಂಡಿಯಾ ಮೈತ್ರಿಕೂಟ ಮಿತ್ರಪಕ್ಷಗಳಾಗಿದ್ದರೂ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತು ಟಿಎಂಸಿ ನಡುವೆ ಮೈತ್ರಿ ಏರ್ಪಟ್ಟಿಲ್ಲ. ಮೈತ್ರಿ ಸಾಧ್ಯವಾಗದೇ ಇರುವುದಕ್ಕೂ ಟಿಎಂಸಿ ಅಧೀರ್ ಅವರನ್ನೇ ದೂಷಿಸಿದೆ.

ಗೂಂಡಾಗಿರಿ ಆರೋಪ ಶುದ್ಧ ಸುಳ್ಳು: ಅಧೀರ್

‘ಚುನಾವಣಾ ಪ್ರಚಾರ ಮುಗಿಸಿ ಮನೆಗೆ ತೆರಳುತ್ತಿರುವ ವೇಳೆ ನನ್ನ ಬಳಿ ಬಂದ ಕೆಲವರು ‘ಗೋ ಬ್ಯಾಕ್‘ ಘೋಷಣೆ ಕೂಗಿದರು. ನಾನು ಕಾರಿನಿಂದ ಇಳಿದು ಮಾತನಾಡಿಸಿದಾಗ, ‘ಕಳೆದ ಐದು ವರ್ಷಗಳಿಂದ ನೀವು ಏನನ್ನೂ ಮಾಡಿಲ್ಲ’ ಎಂದರು ಅಷ್ಟೇ. ಗೂಂಡಾಗಿರಿ ಯಾರು ಮಾಡಿದ್ದು?’ ಎಂದು ಅಧೀರ್ ರಂಜನ್ ಚೌಧರಿ ಎಎನ್‌ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT