ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 15 ಸೆಪ್ಟೆಂಬರ್‌ 2023

Published 15 ಸೆಪ್ಟೆಂಬರ್ 2023, 13:40 IST
Last Updated 15 ಸೆಪ್ಟೆಂಬರ್ 2023, 13:40 IST
ಅಕ್ಷರ ಗಾತ್ರ
Introduction

ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಎಸ್ಪಿ, ಡಿಸಿಪಿಗಳೇ ಹೊಣೆ: ಸಿಎಂ ಸಿದ್ದರಾಮಯ್ಯ, 'TIME' ಜಗತ್ತಿನ ಅತ್ಯುತ್ತಮ 100 ಕಂಪನಿಗಳ ಪಟ್ಟಿ ಬಿಡುಗಡೆ: ಭಾರತದ್ದು ಒಂದೇ!, ನೊಬೆಲ್ ಪ್ರಶಸ್ತಿ ಮೊತ್ತ ಹೆಚ್ಚಳ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ.

1

ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಎಸ್ಪಿ, ಡಿಸಿಪಿಗಳೇ ಹೊಣೆ: ಸಿಎಂ ಸಿದ್ದರಾಮಯ್ಯ

ತಮ್ಮ ಅಧೀನದ ಠಾಣೆಗಳ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಹಾಗೂ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ‌ ಬಾರದಿದ್ದರೆ ಎಸ್ಪಿ ಹಾಗೂ ಡಿಸಿಪಿಗಳನ್ನೇ ಹೊಣೆಯನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಈ ಸುದ್ದಿಯನ್ನು ಪೂರ್ಣ ಓದಿ: ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಎಸ್ಪಿ, ಡಿಸಿಪಿಗಳೇ ಹೊಣೆ: ಸಿಎಂ ಸಿದ್ದರಾಮಯ್ಯ

2

'TIME' ಜಗತ್ತಿನ ಅತ್ಯುತ್ತಮ 100 ಕಂಪನಿಗಳ ಪಟ್ಟಿ ಬಿಡುಗಡೆ: ಭಾರತದ್ದು ಒಂದೇ!

ಟೈಮ್‌ ಮ್ಯಾಗಜಿನ್ ಜಗತ್ತಿನ 100 ಅತ್ಯುತ್ತಮ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯ ಪ್ರಕಾರ ಭಾರತದ ಒಂದೇ ಒಂದು ಕಂಪನಿ ಆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕರ್ನಾಟಕ ಮೂಲದ ಇನ್ಫೊಸಿಸ್ ಕಂಪನಿ ಟೈಮ್ ಮ್ಯಾಗಜಿನ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಂಸ್ಥೆಯಾಗಿದ್ದು 64 ನೇ ಸ್ಥಾನ ಪಡೆದಿದೆ. ಈ ಕುರಿತು ಸಂಭ್ರಮ ವ್ಯಕ್ತಪಡಿಸಿ ಇನ್ಫೊಸಿಸ್ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಈ ಸುದ್ದಿಯನ್ನು ಪೂರ್ಣ ಓದಿ: 'TIME' ಜಗತ್ತಿನ ಅತ್ಯುತ್ತಮ 100 ಕಂಪನಿಗಳ ಪಟ್ಟಿ ಬಿಡುಗಡೆ: ಭಾರತದ್ದು ಒಂದೇ!

3

Fact Check ಹೆಸರಿನಲ್ಲಿ ಮಾಧ್ಯಮಗಳಿಗೆ ಮೂಗುದಾರ: ಭಾಸ್ಕರ್‌ ರಾವ್‌

ಫ್ಯಾಕ್ಟ್‌ ಚೆಕ್‌ ಹೆಸರಿನಲ್ಲಿ ಮಾಧ್ಯಮಗಳಿಗೆ ಮೂಗು ದಾರ ಹಾಕಲು ಹೊರಟಿರುವ ಪ್ರಿಯಾಂಕ್‌ ಖರ್ಗೆ ಗೃಹ ಸಚಿವರ ಸ್ಥಾನವನ್ನು ಹೈಜಾಕ್‌ ಮಾಡಿದ್ದಾರೆ. ಹೀಗಾಗಿ ಗೃಹ ಸಚಿವರು ಯಾರು ಎಂಬ ಗೊಂದಲ ಸೃಷ್ಟಿಯಾಗಿದೆ ಎಂದು ಮಾಜಿ ಪೊಲೀಸ್‌ ಅಧಿಕಾರಿ, ಬಿಜೆಪಿ ನಾಯಕ ಭಾಸ್ಕರ ರಾವ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: Fact Check ಹೆಸರಿನಲ್ಲಿ ಮಾಧ್ಯಮಗಳಿಗೆ ಮೂಗುದಾರ: ಭಾಸ್ಕರ್‌ ರಾವ್‌

4

ರಾಮಚರಿತಮಾನಸ 'ಪೊಟ್ಯಾಸಿಯಂ ಸೈನೈಡ್‌'ನಷ್ಟೆ ವಿಷಕಾರಿ: ಬಿಹಾರ ಸಚಿವ ಚಂದ್ರಶೇಖರ್‌

ರಾಮಚರಿತಮಾನಸದಂತಹ ಪ್ರಾಚೀನ ಕೃತಿಗಳಲ್ಲಿ ‘ಪೊಟ್ಯಾಸಿಯಂ ಸೈನೈಡ್‌’ಗೆ ಹೋಲಿಸುವಂತಹ ವಿನಾಶಕಾರಿ ಅಂಶಗಳಿವೆ ಎಂದು ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್‌ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. 

ಈ ಸುದ್ದಿಯನ್ನು ಪೂರ್ಣ ಓದಿ: ರಾಮಚರಿತಮಾನಸ 'ಪೊಟ್ಯಾಸಿಯಂ ಸೈನೈಡ್‌'ನಷ್ಟೆ ವಿಷಕಾರಿ: ಬಿಹಾರ ಸಚಿವ ಚಂದ್ರಶೇಖರ್‌

5

ಸಪ್ತ ಸಾಗರದಾಚೆ ಎಲ್ಲೋ ತೆಲುಗು ಭಾಷೆಯಲ್ಲಿ ತೆರೆಗೆ: ಬಿಡುಗಡೆ ದಿನಾಂಕ ಘೋಷಣೆ

ಹೇಮಂತ್‌ ಎಂ.ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ರಕ್ಷಿತ್‌ ಶೆಟ್ಟಿ–ರುಕ್ಮಿಣಿ ವಸಂತ್‌ ಜೋಡಿ ತೆರೆಯಲ್ಲಿ ಮೋಡಿ ಮಾಡಿದ್ದು, ಸಿನಿಮಾ ಇತರೆ ಭಾಷೆಗಳಲ್ಲಿ ಡಬ್‌ ಆಗಿ ಪ್ರದರ್ಶನ ಕಾಣಲು ಸಜ್ಜಾಗುತ್ತಿದೆ.

ಈ ಸುದ್ದಿಯನ್ನು ಪೂರ್ಣ ಓದಿ: ಸಪ್ತ ಸಾಗರದಾಚೆ ಎಲ್ಲೋ ತೆಲುಗು ಭಾಷೆಯಲ್ಲಿ ತೆರೆಗೆ: ಬಿಡುಗಡೆ ದಿನಾಂಕ ಘೋಷಣೆ

6

ನೊಬೆಲ್ ಪ್ರಶಸ್ತಿ ಮೊತ್ತ ಹೆಚ್ಚಳ

ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಮೊತ್ತವನ್ನು ನೊಬೆಲ್ ಫೌಂಡೇಶನ್ ಹೆಚ್ಚಳ ಮಾಡಿದೆ. ಪ್ರಶಸ್ತಿ ಮೊತ್ತವನ್ನು 10 ಮಿಲಿಯನ್ ಸ್ವೀಡಿಶ್ ಕ್ರೌನ್‌ನಿಂದ 11 ಮಿಲಿಯನ್ ಸ್ವೀಡಿಶ್ ಕ್ರೌನ್‌ಗೆ ಹೆಚ್ಚಳ ಮಾಡಲಾಗಿದೆ. ಅಂದರೆ ಪ್ರಶಸ್ತಿ ಪುರಸ್ಕೃತರು ಭಾರತೀಯ ರೂಪಾಯಿಯಲ್ಲಿ ₹ 8.19 ಕೋಟಿ ಪಡೆಯಲಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ನೊಬೆಲ್ ಪ್ರಶಸ್ತಿ ಮೊತ್ತ ಹೆಚ್ಚಳ

7

ಸನಾತನ ಧರ್ಮ ಇತರ ಮತಗಳನ್ನು ದೂರ ಇಡುವಂತೆ ಬೋಧಿಸುವುದಿಲ್ಲ: ಕಮಲ್ ನಾಥ್

ಕಮಲ್ ನಾಥ್
ಕಮಲ್ ನಾಥ್

ಭಾರತ ಹಲವಾರು ಮತಗಳ ನೆಲೆಯಾಗಿದ್ದು, ಸನಾತನ ಧರ್ಮವು ಯಾವುದೇ ಮತ, ನಂಬಿಕೆಗಳನ್ನು ದೂರವಿಡುವಂತೆ ಯಾರಿಗೂ ಬೋಧಿಸುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ಕಮಲ್ ನಾಥ್ ಹೇಳಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ಸನಾತನ ಧರ್ಮ ಇತರ ಮತಗಳನ್ನು ದೂರ ಇಡುವಂತೆ ಬೋಧಿಸುವುದಿಲ್ಲ: ಕಮಲ್ ನಾಥ್

8

ತುಮಕೂರು: ಕೆಮಿಕಲ್‌ ಕಾರ್ಖಾನೆಯಲ್ಲಿ ಅಗ್ನಿ ದುರಂತ

ತುಮಕೂರು ನಗರ ಹೊರ ವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕೆಮಿಕಲ್‌ ಕಾರ್ಖಾನೆಯಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ.

ಈ ಸುದ್ದಿಯನ್ನು ಪೂರ್ಣ ಓದಿ: ತುಮಕೂರು: ಕೆಮಿಕಲ್‌ ಕಾರ್ಖಾನೆಯಲ್ಲಿ ಅಗ್ನಿ ದುರಂತ

9

ಪಿ.ಎಂ ವಿಶ್ವಕರ್ಮ ಯೋಜನೆ: ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಚಾಲನೆ

‘ವಿಶ್ವಕರ್ಮ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 17ರಂದು (ಭಾನುವಾರ) ‘ಪಿ.ಎಂ ವಿಶ್ವಕರ್ಮ’ ಎಂಬ ಹೊಸ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ಪಿ.ಎಂ ವಿಶ್ವಕರ್ಮ ಯೋಜನೆ: ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

10

ಎಬಿಸಿ ಅಧ್ಯಕ್ಷರಾಗಿ ಶ್ರೀನಿವಾಸನ್‌ ಕೆ. ಸ್ವಾಮಿ ಆಯ್ಕೆ

ಶ್ರೀನಿವಾಸನ್‌ ಕೆ. ಸ್ವಾಮಿ
ಶ್ರೀನಿವಾಸನ್‌ ಕೆ. ಸ್ವಾಮಿ

ಆಡಿಟ್‌ ಬ್ಯೂರೊ ಆಫ್‌ ಸರ್ಕ್ಯೂಲೇಷನ್ಸ್‌ (ಎಬಿಸಿ) ನೂತನ ಅಧ್ಯಕ್ಷರಾಗಿ ‘ಆರ್‌.ಕೆ. ಸ್ವಾಮಿ ಹನ್ಸ ಸಮೂಹ’ದ ಕಾರ್ಯಾಧ್ಯಕ್ಷ ಶ್ರೀನಿವಾಸನ್‌ ಕೆ. ಸ್ವಾಮಿ ಅವರು 2023–24ನೇ ಸಾಲಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ಎಬಿಸಿ ಅಧ್ಯಕ್ಷರಾಗಿ ಶ್ರೀನಿವಾಸನ್‌ ಕೆ. ಸ್ವಾಮಿ ಆಯ್ಕೆ