ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಮುಂಬೈ/ಪುಣೆ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ, ದಿವಂಗತ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
.ಸುನೇತ್ರಾ ಪ್ರಮಾಣ ಇಂದು? ಎನ್ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆ ಸಾಧ್ಯತೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ನಿರಂತರವಾಗಿ, ಅತ್ಯಂತ ಹೆಚ್ಚಿನ ಅವಧಿಗೆ ಕೇಂದ್ರದ ಹಣಕಾಸು ಸಚಿವರ ಹುದ್ದೆಯನ್ನು ನಿರ್ವಹಿಸಿದ ಹೆಗ್ಗಳಿಕೆ ನಿರ್ಮಲಾ ಅವರದ್ದು.
.Union Budget-2026: ಸತತ 9ನೆಯ ಬಾರಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್.
ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನಗಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್ಐಟಿ) ಖ್ಯಾತ ನಟ ಜಯರಾಮ್ ಅವರನ್ನು ವಿಚಾರಣೆಗೆ ಒಳಪಡಿಸಿವೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
.ಶಬರಿಮಲೆ ಚಿನ್ನ ಕಳವು: ಎಸ್ಐಟಿಯಿಂದ ನಟ ಜಯರಾಮ್ ವಿಚಾರಣೆ.
ಬೆಂಗಳೂರು: ‘ಭಾರತದಿಂದ ಯಾವುದೇ ವಿದೇಶಿಯರನ್ನು ಹೊರಹಾಕಲು ಸೂಕ್ತ ಆದೇಶ ಹೊರಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ’ ಎಂದು ಪ್ರಕರಣವೊಂದರಲ್ಲಿ ಉಲ್ಲೇಖಿಸಿರುವ ಕರ್ನಾಟಕ ಹೈಕೋರ್ಟ್, ‘ಭಾರತದಲ್ಲಿರುವ ವಿದೇಶಿಯರು ತಮ್ಮ ವೀಸಾ ಅಥವಾ ವೀಸಾ ನವೀಕರಣಕ್ಕೆ ಒತ್ತಾಯ ಮಾಡುವ ಹಕ್ಕನ್ನು ಹೊಂದಿಲ್ಲ’ ಎಂದು ಸ್ಪಷ್ಟಪಡಿಸಿದೆ.
.ವಿದೇಶಿಯರ ಹೊರಹಾಕುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ: ಕರ್ನಾಟಕ ಹೈಕೋರ್ಟ್.
ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ ಪಾಲಿಟೆಕ್ನಿಕ್ ಸೇರಿದಂತೆ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಖಾಲಿ ಇರುವ 2,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ.
.ಉನ್ನತ ಶಿಕ್ಷಣ: 2,000 ಬೋಧಕ ಹುದ್ದೆಗಳ ಭರ್ತಿಗೆ ಸಮ್ಮತಿ.
ನ್ಯೂಯಾರ್ಕ್: ಭಾರತದ ದೇಗುಲಗಳಿಂದ ಅಕ್ರಮವಾಗಿ ತೆರವುಗೊಂಡಿದ್ದ ಮೂರು ಪುರಾತನ ಕಂಚಿನ ವಿಗ್ರಹಗಳನ್ನು ಭಾರತಕ್ಕೆ ಮರಳಿಸಲು ಅಮೆರಿಕ ನಿರ್ಧರಿಸಿದೆ.

ಮೂರು ವಿಗ್ರಹಗಳನ್ನು ಭಾರತದ ದೇಗುಲಗಳಿಂದ ಅಕ್ರಮವಾಗಿ ತೆರವುಗೊಳಿಸಲಾಗಿತ್ತು ಎಂಬುದು ಸಂಶೋಧನೆಯ ಮೂಲಕ ಖಚಿತವಾಗಿರುವುದರಿಂದ ಅವುಗಳನ್ನು ಭಾರತ ಸರ್ಕಾರಕ್ಕೆ ನೀಡಲಾಗುತ್ತದೆ ಎಂದು ವಾಷಿಂಗ್ಟನ್ನಲ್ಲಿರುವ ನ್ಯಾಷನಲ್ ‘ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್’ ಬುಧವಾರ ತಿಳಿಸಿದೆ.
.ಭಾರತಕ್ಕೆ 3 ಪುರಾತನ ವಿಗ್ರಹಗಳನ್ನು ನೀಡಲು ಮುಂದಾದ ಅಮೆರಿಕ.
ತಿರುವನಂತಪುರ: ವಿಕೆಟ್ಕೀಪರ್–ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ತವರಿನ ಅಂಗಳದಲ್ಲಿ ಲಯಕ್ಕೆ ಮರಳುವರೇ? ಆಲ್ರೌಂಡ್ ಅಕ್ಷರ್ ಪಟೇಲ್ ಪೂರ್ಣಪ್ರಮಾಣದಲ್ಲಿ ಫಿಟ್ ಆಗಿ ಕಣಕ್ಕಿಳಿಯುವರೇ?
.ಭಾರತ–ನ್ಯೂಜಿಲೆಂಡ್ ಕೊನೆಯ ಟಿ20 ಇಂದು: ತವರಿನಲ್ಲಿ ಲಯಕ್ಕೆ ಮರಳುವರೇ ಸಂಜು.
ವಡೋದರ: ಗುಜರಾತ್ ಜೈಂಟ್ಸ್ ತಂಡವು ಶುಕ್ರವಾರ ಮಹಿಳಾ ಪ್ರೀಮಿಯರ್ ಲೀಗ್ನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 11 ರನ್ಗಳಿಂದ ಮಣಿಸಿ ಎಲಿಮಿನೇಟರ್ಗೆ ಅರ್ಹತೆ ಪಡೆಯಿತು.
.WPL: ಎಲಿಮಿನೇಟರ್ಗೆ ಗುಜರಾತ್ ಜೈಂಟ್ಸ್ ಲಗ್ಗೆ.
ನವದೆಹಲಿ: ಗಗನಮುಖಿಯಾಗಿದ್ದ ಚಿನ್ನ ಮತ್ತು ಬೆಳ್ಳಿಯ ದರವು ಶುಕ್ರವಾರ ಇಳಿಕೆ ಕಂಡಿದೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ನಡೆದ ವಹಿವಾಟಿನಲ್ಲಿ ಚಿನ್ನದ ದರವು 10 ಗ್ರಾಂಗೆ ₹14 ಸಾವಿರದಷ್ಟು, ಬೆಳ್ಳಿಯ ದರವು ಕೆ.ಜಿ.ಗೆ ₹20 ಸಾವಿರದಷ್ಟು ಇಳಿಕೆ ಆಗಿದೆ.
.ಲಾಭ ಗಳಿಕೆ ವಹಿವಾಟು: ಚಿನ್ನದ ದರ ₹14 ಸಾವಿರ, ಬೆಳ್ಳಿಯ ದರ ₹20 ಸಾವಿರ ಇಳಿಕೆ .
ಬೆಂಗಳೂರು: ಹೋಂವರ್ಕ್ ಮಾಡಿಲ್ಲವೆಂದು ನಾಲ್ಕನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಬರುವಂತೆ ಥಳಿಸಿದ್ದು, ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.ಹೋಂವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಥಳಿತ: ಶಿಕ್ಷಕಿ ವಿರುದ್ಧ ಎಫ್ಐಆರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.