ನವದೆಹಲಿ: ಮುಂಬೈಯಂತೆ ದೆಹಲಿಯಲ್ಲಿ ಸಹ ಸ್ಟೇಡಿಯಂ ಸೇರಿದಂತೆ ತೆರೆದ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲಹೆ ಎಂಬಂತೆ ಸ್ವೀಕರಿಸಿ, ಅದರ ಸಾಧ್ಯತೆಗಳ ಬಗ್ಗೆ ಪರಿಶೀಲಸಬೇಕು ಎಂದು ದೆಹಲಿ ಹೈಕೋರ್ಟ್ ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ಪೀಠವು ‘ಈ ಅರ್ಜಿಗೆ ಅನ್ವಯಿಸುವಂತೆ ಕಾನೂನು, ನಿಯಮ ಮತ್ತು ನೀತಿಗೆ ಅನುಗುಣವಾಗಿ ಪ್ರಾತಿನಿಧ್ಯವನ್ನು ನಿರ್ಧರಿಸಿ’ ಎಂದು ಸೂಚಿಸಿತು.

‘ಮುಂಬೈನಲ್ಲಿ ಸ್ಟೇಡಿಯಂ, ಬೃಹತ್ ಮೈದಾನಗಳಂತಹ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅದರಂತೆ ದೆಹಲಿಯಲ್ಲೂ ತೆರೆದ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಬೇಕು. ಈ ಮೂಲಕ ಜನರು ಪರಸ್ಪರ ಸಂಪರ್ಕಕ್ಕೆ ಬಾರದಂತೆ ತಡೆಯಬಹುದು ಮತ್ತು ಅಂತರವನ್ನು ಕಾಯ್ದುಕೊಳ್ಳಬಹುದು’ ಎಂದು ದೆಹಲಿ ಮೂಲದ ವ್ಯಾಪಾರಿ ಅಮನ್‌ದೀಪ್ ಅಗರ್‌ವಾಲ್ ಸಲ್ಲಿಸಿದ ಪಿಐಎಲ್‌ನಲ್ಲಿ ತಿಳಿಸಿದ್ದಾರೆ.

‘ಜನರು ಗುಂಪುಗೂಡುವುದನ್ನು ತಡೆಯಲು ಲಾಕ್‌ಡೌನ್, ಕರ್ಫ್ಯೂನಂತಹ ನಿಯಮಗಳು ಜಾರಿಗೆ ತರಬಹುದು. ಆದರೆ ಲಸಿಕಾ ಕೇಂದ್ರಗಳಂತಹ ಮುಚ್ಚಿದ ಸ್ಥಳಗಳಲ್ಲಿ ಜನರು ಗುಂಪುಗೂಡಿದರೆ ಲಾಕ್‌ಡೌನ್ ವಿಧಿಸಿಯೂ ಏನೂ ಪ್ರಯೋಜನ’ ಎಂದು ಅರ್ಜಿದಾರರ ಪರ ವಕೀಲರಾದ ಎ.ಎಸ್ ಚಾಂದಿಯೋಕ್ ಮತ್ತು ರುಶಾಬ್ ಅಗರ್ವಾಲ್ ಹೇಳಿದ್ದಾರೆ.

‘ತೆರೆದ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗಬಹುದು’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.