ನವದೆಹಲಿ: ಸುಂಕ ನೀತಿಯನ್ನು ಬದಲಾಯಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸುತ್ತಿದ್ದಾರೆ. ಭಾರತ ಮತ್ತೆ ಅವರೊಂದಿಗೆ ಮಾತುಕತೆ ನಡೆಸಬೇಕು ಎಂದು ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅಮೆರಿಕದ ‘ಬ್ರೌನ್’ ವಿಶ್ವವಿದ್ಯಾಲಯದಲ್ಲಿನ ‘ವಾಟ್ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಆ್ಯಂಡ್ ಪಬ್ಲಿಕ್ ಅಫೈರ್ಸ್’ನಲ್ಲಿ ನಡೆಸಿದ್ದ ಸಂವಾದದ ವಿಡಿಯೊ ತುಣುಕನ್ನು ರಾಹುಲ್ ಸೋಮವಾರ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಅಮೆರಿಕ ಸುಂಕ ವಿಧಿಸಿರುವುದಕ್ಕೆ ಭಾರತದ ಪ್ರತಿಕ್ರಿಯೆ ಏನು ಎಂಬುದನ್ನು ನಮ್ಮ ಸರ್ಕಾರ ತಿಳಿಸಿಲ್ಲ. ಹಾಗಾಗಿ ನಮಗೆ ಗೊತ್ತಿಲ್ಲ. ಮಾತುಕತೆ ನಡೆಸಿದರೆ ಟ್ರಂಪ್ ಸುಂಕ ನೀತಿಯನ್ನು ಸಡಿಲಗೊಳಿಸಬಹುದು. ಮಾತುಕತೆಯ ಮೂಲಕ ಯೋಗ್ಯ ಒಪ್ಪಂದವನ್ನು ಮಾಡಿಕೊಳ್ಳಲು ನಾವು ಸಮರ್ಥರಾಗಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.