ಚೆನ್ನೈ: ತಮಿಳುನಾಡಿನಲ್ಲಿ ₹ 1,112 ಕೋಟಿ ಮೌಲ್ಯದ ಎರಡು ಎಲೆಕ್ಟ್ರಾನಿಕ್ಸ್ ಕ್ಲಸ್ಟರ್ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
.ತಮಿಳುನಾಡು ಬಜೆಟ್: ಸಮಗ್ರ ಶಿಕ್ಷಣಕ್ಕೆ ₹2,152 ಕೋಟಿ .
ಚೆನ್ನೈನಿಂದ 55 ಕಿ.ಮೀ ದೂರದಲ್ಲಿರುವ ಶ್ರೀಪೆರಂಬದೂರಿನಲ್ಲಿ ’Zetwerk Electronics’ನ ಏಳನೇ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಎಲೆಕ್ಟ್ರಾನಿಕ್ಸ್ ಉದ್ಯಮವು ದೇಶದ ಎರಡನೇ ಅತಿದೊಡ್ಡ ರಫ್ತು ವಲಯವಾಗಿದೆ. ಕಳೆದ ದಶಕದಲ್ಲಿ ಹಲವಾರು ಸಾಂಪ್ರದಾಯಿಕ ಕೈಗಾರಿಕೆಗಳನ್ನು ಮೀರಿಸಿದೆ’ ಎಂದು ಹೇಳಿದ್ದಾರೆ.

₹1,000 ಕೋಟಿ ಹೂಡಿಕೆಯ ಭಾಗವಾಗಿರುವ ಈ ಹೊಸ ಸೌಲಭ್ಯವು ಗ್ರಾಹಕ ಬಾಳಿಕೆ ಬರುವ ವಸ್ತುಗಳು ಮತ್ತು ಐಟಿ ಹಾರ್ಡ್ವೇರ್ ಸೇರಿದಂತೆ ವಿವಿಧ ವಲಯಗಳಿಗೆ ಬೇಕಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಉತ್ಪಾದಿಸಲಿದೆ. ಭವಿಷ್ಯದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೂ ವಿಸ್ತರಣೆಯಾಗಲಿದೆ.
.ತಮಿಳುನಾಡು, ಪೆರಿಯಾರ್ ಅವರನ್ನು ಕೇಂದ್ರ ಅವಮಾನಿಸಿದೆ: ಉದಯನಿಧಿ ಕಿಡಿ.
‘ತಮಿಳುನಾಡಿನಲ್ಲಿ ಎರಡು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ಗಳನ್ನು ಸ್ಥಾಪಿಸಲು ಸರ್ಕಾರ ₹1,112 ಕೋಟಿ ಹೂಡಿಕೆ ಮಾಡಲಿದೆ. ಪಿಳ್ಳೈಪಕ್ಕಂ (ಕಾಂಚಿಪುರಂ) ಮತ್ತು ಮಣಲೂರು (ತಿರುವಳ್ಳೂರು ಜಿಲ್ಲೆ)ಯಲ್ಲಿ ಈ ಘಟಕಗಳು ಸ್ಥಾಪನೆಯಾಗಲಿವೆ. ಅವು ದೊಡ್ಡ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ಗಳಾಗಲಿವೆ. ಈ ಎರಡು ಕ್ಲಸ್ಟರ್ಗಳು ತಮಿಳುನಾಡಿಗೆ ಮತ್ತು ದೇಶಕ್ಕೆ ದೊಡ್ಡ ಕೊಡುಗೆ ನೀಡಲಿದೆ’ ಎಂದು ಅವರು ಭಾಷಣದಲ್ಲಿ ಹೇಳಿದ್ದಾರೆ.

ಭಾರತದ ಎಲೆಕ್ಟ್ರಾನಿಕ್ ರಫ್ತುಗಳನ್ನು ಹೆಚ್ಚಿಸುವಲ್ಲಿ ಬೆಂಬಲ ನೀಡಿದ್ದಕ್ಕಾಗಿ ತಮಿಳುನಾಡು ಸೇರಿದಂತೆ ರಾಜ್ಯ ಸರ್ಕಾರಗಳಿಗೆ ಅವರು ಇದೇ ವೇಳೆ ಧನ್ಯವಾದ ಹೇಳಿದ್ದಾರೆ.
.ಸ್ಪರ್ಧಾ ವಾಣಿ | ‘ಕಬ್ಬಿಣ’ದ ಮೂಲ ತಮಿಳುನಾಡು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.