ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಲ್ಫಾ ಒಪ್ಪಂದದಿಂದ ಸ್ಥಳೀಯ ಜನರಿಗೆ ಹೆಚ್ಚಿನ ಸುರಕ್ಷತೆ: ಅಸ್ಸಾಂ ಸಿಎಂ

Published 1 ಜನವರಿ 2024, 16:35 IST
Last Updated 1 ಜನವರಿ 2024, 16:35 IST
ಅಕ್ಷರ ಗಾತ್ರ

ಗುವಾಹಟಿ: ಉಲ್ಫಾದ ಕೆಲ ಸಂಘಟನೆಗಳ ಜೊತೆ ಒಪ್ಪಂದವಾಗಿರುವುದು ರಾಜ್ಯದಲ್ಲಿ ಸ್ಥಳೀಯರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲಿದ್ದು, ಅವರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಭೂಮಿಯ ಹಕ್ಕುಗಳು ಸಿಗಲಿವೆ ಎಂದು ಮುಖ್ಯಮಂತ್ರಿ ಹಿಮಂತಾ ಬಿಸ್ವ ಶರ್ಮಾ ಸೋಮವಾರ ಹೇಳಿದರು.

ಹೊಸ ವರ್ಷದ ನಿಮಿತ್ತ ಔಪಚಾರಿಕವಾಗಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಅಸ್ಸಾಂನ ಸಾರ್ವಭೌಮತೆಗೆ ಒತ್ತಾಯಿಸಲು ಉಲ್ಫಾ ರಚನೆಯಾಗಿತ್ತು. ಯಾರೊಬ್ಬರಿಗೂ ಸಾರ್ವಭೌಮತೆ ಸಿಗುವುದಿಲ್ಲ. ಆದರೆ, ಈ ಒಪ್ಪಂದವು ಅಸ್ಸಾಂ ಜನರಿಗೆ ಸಂವಿಧಾನದ ಅನುಸಾರ ಹೆಚ್ಚಿನ ಸುರಕ್ಷತೆ ಒದಗಿಸಲಿದೆ ಎಂದು ಹೇಳಿದರು.

ಕ್ಷೇತ್ರ ಪುನರ್ವಿಂಗಡಣೆ ಪ್ರಕಾರ, ಬ್ರಹ್ಮಪುತ್ರ ಕಣಿವೆ ವ್ಯಾಪ್ತಿಯಲ್ಲಿ 96 ಮತ್ತು ಬರಾಕ್‌ ಕಣಿವೆ ಭಾಗದ ಎಂಟು ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಅಸ್ಸಾಂನ ಸ್ಥಳೀಯ ನಿವಾಸಿಗಳಿಗೆ ಖಾತರಿಯಾಗಿ ರಾಜಕೀಯ ಪ್ರಾತಿನಿಧ್ಯ ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಲ್ಫಾ ಮುಖಂಡ, ಪರೇಶ್ ಬರೂಚ್‌ ಸಂಪರ್ಕದಲ್ಲಿದ್ದು, ಅವರು ಇನ್ನೂ ಶಾಂತಿ ಪ್ರಕ್ರಿಯೆಗೆ ದಾಖಲಾಗಬೇಕಿದೆ. ಅವರ ಜೊತೆ ಚರ್ಚಿಸುತ್ತೇನೆ. ಬೇಗನೆ ಅವರುಮಾತುಕತೆಗೆ ಸಿದ್ಧರಿರಲಿರಲಾರರು. ಅವರ ಪತ್ತೆಗೆ ಕ್ರಮವಹಿಸಬಾರದು ಎಂದು ಪೊಲೀಸರಿಗೆ ಸೂಚಿಸುತ್ತೇನೆ ಎಂದರು.

‘ಆತ ರಾಜ್ಯದಿಂದ ಹೊರಗಿದ್ದು, ಈಗ ಯಾವ ರಾಜ್ಯದಲ್ಲಿದ್ದಾನೆ ಎಂದು ತಿಳಿದಿಲ್ಲ. ಆದರೆ, ಕನಿಷ್ಠ 15 ದಿನ ರಾಜ್ಯದಲ್ಲಿದ್ದು, ಅಸ್ಸಾಂನಲ್ಲಿ ಆಗಿರುವ ಅಭಿವೃದ್ಧಿ ಗಮನಿಸಬೇಕು ಎಂದು ಅವರಿಗೆ ತಿಳಿಸಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT