ಮುಜಾಫರ್ನಗರ (ಉತ್ತರ ಪ್ರದೇಶ): ಇಲ್ಲಿನ ಮದರಸಾದಲ್ಲಿ ಓದ್ದಿದ್ದ ಇಬ್ಬರು ಶಂಕಿತ ಉಗ್ರರನ್ನು ಗುಜರಾತ್ ಭಯೋತ್ಪಾದನಾ ವಿರೋಧಿ ದಳದ (ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ.

ಶಮ್ಲಿ ಜಿಲ್ಲೆಯ ಜಿಂಜನಾ ನಗರದ ಆಜಾದ್ ಸುಲೇಮಾನ್ ಶೇಖ್ (20) ಮತ್ತು ಲಖೀಂಪುರ ಖೇರಿಯ ಮೊಹಮ್ಮದ್ ಸುಹೇಲ್ ಕಾನ್ (23) ಬಂಧಿತರು.

ಬುಧಾನಾ ಮದರಸಾದ ಮುಖ್ಯಸ್ಥ ಪಿಟಿಐ ಜತೆ ಮಾತನಾಡಿ, ‘ಎಟಿಎಸ್ ಅಧಿಕಾರಿಗಳು ಬಂಧಿಸಿದ ಇಬ್ಬರೂ ಇದೇ ಮದರಾಸಾದಲ್ಲಿ ಓದಿದ್ದಾರೆ. ಆದರೆ ಬಹಳ ಹಿಂದೆಯೇ ಮದರಸಾ ತೊರೆದಿದ್ದಾರೆ. ಆಜಾದ್ ಶೇಖ್ 2018–19ರ ಸಮಯದಲ್ಲಿ ಓದುತ್ತಿದ್ದ. ಕೋವಿಡ್ ಲಾಕ್ಡೌನ್ ವೇಳೆ ಮದರಸಾ ಬಂದ್ ಆಗಿತ್ತು. ಆ ಸಂದರ್ಭದಲ್ಲಿ ಹೋದವನು ಮತ್ತೆ ಹಿಂತಿರುಗಲಿಲ್ಲ. ಸುಹೇಲ್ 3 ತಿಂಗಳ ಹಿಂದೆ ಸೇರಿಕೊಂಡಿದ್ದ. ದರೆ ತಂದೆಗೆ ಅನಾರೋಗ್ಯ ಎಂದು ನ.5ರಂದು ಹೋದವನು ಮತ್ತೆ ಬರಲಿಲ್ಲ. ಮಾಧ್ಯಮಗಳ ಮೂಲಕ ಇವರಿಬ್ಬರ ಬಂಧನವಾಗಿರುವುದು ತಿಳಿಯಿತು’ ಎಂದು ಮಾಹಿತಿ ನೀಡಿದ್ದಾರೆ.

ಆಜಾದ್ನನ್ನು ವಶಕ್ಕೆ ಪಡೆಯಲಾಗಿದ್ದು, ಗುಜರಾತ್ ಎಟಿಎಸ್ ವಿಚಾರಣೆ ನಡೆಸುತ್ತದೆ. ಇದೇ ವೇಳೆ ಉತ್ತರ ಪ್ರದೇಶ ಎಟಿಎಸ್ ಆತನ ಹಿನ್ನೆಲೆಯನ್ನು ವಿಚಾರಿಸುತ್ತಿದೆ ಎಂದು ಶಮ್ಲಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
.'ವೈಟ್ಕಾಲರ್ ಭಯೋತ್ಪಾದನೆ': ಶಿಕ್ಷಿತ ವೃತ್ತಿಪರರ ಬಳಸಿ ಉಗ್ರ ಕೃತ್ಯಕ್ಕೆ ಪಿತೂರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.