ವಾಷಿಂಗ್ಟನ್: ಇಂಡೊ–ಪೆಸಿಫಿಕ್ ವಲಯದಲ್ಲಿ ಮುಕ್ತ ಮತ್ತು ಸರಾಗ ಚಟುವಟಿಕೆಗಾಗಿ ಭಾರತವು ಅಮೆರಿಕದ ಜೊತೆಗೆ ಇರುವುದುಮುಖ್ಯ ಎಂದುಅಮೆರಿಕದ ರಾಜತಾಂತ್ರಿಕರೊಬ್ಬರು ಸೋಮವಾರ ಪ್ರತಿಪಾದಿಸಿದ್ದಾರೆ. ಪರಸ್ಪರ ಸಹಯೋಗವು ಭಾರತಕ್ಕೂ ಇಂಡೊ–ಪೆಸಿಫಿಕ್ ವಲಯದಲ್ಲಿ ತನ್ನದೇ ಸ್ಥಾನ ಕಂಡುಕೊಳ್ಳಲು ನೆರವಾಗಿದೆ ಎಂದಿದ್ದಾರೆ.

ಇಂಡೊ–ಪೆಸಿಪಿಕ್ ನೂತನ ಕಾರ್ಯತಂತ್ರವು ಆಧುನಿಕ ಜಗತ್ತಿನ ವಾಸ್ತವಗಳನ್ನು ಬಿಂಬಿಸಲಿದೆ. ಪ್ರಜಾಸತ್ತಾತ್ಮಕ, ಮುಕ್ತ ಮಾರುಕಟ್ಟೆ ಮತ್ತು ಭಾರತದ ಜನರು ಅಮರಿಕನ್ನರೊಂದಿಗೆ ಹಂಚಿಕೊಳ್ಳುವ ಭಾವನೆಗಳನ್ನು ಬಿಂಬಿಸಲಿದೆ ಎಂದು ವಿದೇಶಾಂಗ ಸಚಿವಾಲಯದ ಉಪಕಾರ್ಯದರ್ಶಿ ಸ್ಟೀಫನ್ ಬೀಗನ್ ಹೇಳಿದರು.

ಯುಎಸ್- ಇಂಡಿಯಾ ಸ್ಟ್ರಾಟಜಿಕ್ ಮತ್ತು ಪಾರ್ಟನರ್‌ಶಿಪ್ ಆಯೋಜಿಸಿದ್ದ ‘ಭಾರತ-ಅಮೆರಿಕ ನಾಯಕತ್ವ’ ವಿಷಯ ಕುರಿತ ಶೃಂಗಸಭೆಯಲ್ಲಿ ಅವರು ಮಾತನಾಡಿದರು.

ಯಶಸ್ಸು ಗಳಿಸುವ ನಿಟ್ಟಿನಲ್ಲಿ ಆರ್ಥಿಕತೆ, ಭದ್ರತೆ ಕುರಿತ ಸಹಕಾರ ಸೇರಿದಂತೆ ಎಲ್ಲ ಹಂತದಲ್ಲಿಯೂ ಪೂರ್ಣ ಅವಕಾಶಗಳನ್ನು ಬಳಸಿಕೊಳ್ಳಲಾಗಿದೆ. ಭಾರತದ ಸಹಕಾರ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಉಭಯ ದೇಶಗಳುವಾಣಿಜ್ಯ ಉದಾರೀಕರಣವೂ ಒಳಗೊಂಡಂತೆ ವಿಶಾಲವಾದ ನಿಟ್ಟಿನಲ್ಲಿ ಆರ್ಥಿಕ ಸಹಭಾಗಿತ್ವವನ್ನು ಹೊಂದುವ ಪ್ರಕ್ರಿಯೆಯಲ್ಲಿ ತೊಡಗಿವೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.