ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ವರಿಷ್ಠರು ಸ್ಪರ್ಧಿಸುವ ಅಮೇಠಿ, ರಾಯಬರೇಲಿಯಲ್ಲಿ ಯಾರಿಗೆ ಗೆಲುವು?

Last Updated 10 ಮಾರ್ಚ್ 2022, 12:45 IST
ಅಕ್ಷರ ಗಾತ್ರ

ಲಖನೌ: ಕಾಂಗ್ರೆಸ್‌ನ ಸಾಂಪ್ರದಾಯಿಕ ಲೋಕಸಭಾ ಕ್ಷೇತ್ರಗಳು ಎಂದೇ ಗುರುತಿಸಿಕೊಂಡಿರುವ ರಾಯಬರೇಲಿ ಮತ್ತು ಅಮೇಠಿ ಕ್ಷೇತ್ರಗಳ ವ್ಯಾಪ್ತಿಯ ಯಾವೊಂದು ವಿಧಾನಸಭೆ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲುವ ಮುನ್ಸೂಚನೆಗಳನ್ನು ತೋರಿಸಿಲ್ಲ.

ಏಳು ಹಂತಗಳ ಮತದಾನ ಕಂಡಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಬಿಜೆಪಿ 263 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚಿಸುವ ಉಮೇದಿನಲ್ಲಿದೆ. ಸಮಾಜವಾದಿ ಪಕ್ಷದ ನೇತೃತ್ವದ ಮೈತ್ರಿ ಕೂಟ 133 ಸ್ಥಾನಗಳಲ್ಲಿ ಮುಂದಿದೆ. ಕಾಂಗ್ರೆಸ್‌ 3ರಲ್ಲಿ, ಬಿಎಸ್‌ಪಿ 2 ಕ್ಷೇತ್ರಗಳಲ್ಲಿ ಮಾತ್ರ ಮುಂದಿವೆ.

ಗಾಂಧಿ ಮನೆತನದ ಸ್ಪರ್ಧಿಗಳೇ ಹೆಚ್ಚಾಗಿ ಗೆಲ್ಲುತ್ತಾ ಬಂದಿರುವ, ಕಾಂಗ್ರೆಸ್‌ನ ಪ್ರಭಾವ ಹೆಚ್ಚಿರುವ ರಾಯಬರೇಲಿ ಮತ್ತು ಅಮೇಠಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸೋಲಿನತ್ತ ಮುಖ ಮಾಡಿದೆ.

ಸದ್ಯ ಸೋನಿಯಾ ಗಾಂಧಿ ಅವರು (2004ರಿಂದ) ಪ್ರತಿನಿಧಿಸುತ್ತಿರುವ ರಾಯಬರೇಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಐದು ವಿಧಾನಸಭೆ ಕ್ಷೇತ್ರಗಳ ಪೈಕಿ ಎಸ್‌ಪಿ ಮೂರಲ್ಲಿ ಮುಂದಿದ್ದರೆ, ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಮುಂದಿದೆ.

ಈ ಕ್ಷೇತ್ರವನ್ನು ಹಿಂದೆ ಫಿರೋಜ್‌ ಗಾಂಧಿ (1952–60), ಇಂದಿರಾಗಾಂಧಿ (1967–77) ಅವರು ಪ್ರತಿನಿಧಿಸಿದ್ದರು.

ಅಮೇಠಿಯಲ್ಲಿಯೂ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ ಮೂರರಲ್ಲಿ ಮುಂದಿದೆ. ಎಸ್‌ಪಿ ಎರಡರಲ್ಲಿ ಮುನ್ನಡೆ ಸಾಧಿಸಿದೆ. 2004ರಿಂದ ರಾಹುಲ್‌ ಗಾಂಧಿ ಅವರು ಸತತವಾಗಿ ಈ ಕ್ಷೇತ್ರವನ್ನು ಗೆಲ್ಲುತ್ತಾ ಬಂದಿದ್ದದ್ದರು. ಆದರೆ, 2019ರ ಬಿಜೆಪಿಯ ಸ್ಮೃತಿ ಇರಾನಿ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

ಇದಕ್ಕೂ ಹಿಂದೆ ಸಂಜಯ್‌ ಗಾಂಧಿ (1880), ರಾಜೀವ್‌ ಗಾಂಧಿ 1981ರಿಂದ 1991), ಸೋನಿಯಾ ಗಾಂಧಿ (1999) ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT