ಡೆಹ್ರಾಡೂನ್: ಸೈಬರ್ ಅಪರಾಧಗಳಿಗೆ ಬಳಸಿಕೊಳ್ಳಲು ಥಾಯ್ಲೆಂಡ್ ಮೂಲಕ ಮ್ಯಾನ್ಮಾರ್ಗೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಉತ್ತರಾಖಂಡ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಮೂವರನ್ನು ಬಂಧಿಸಿದೆ.

ಇತ್ತೀಚೆಗೆ ಮ್ಯಾನ್ಮಾರ್ನಿಂದ ಕರೆತರಲಾದ ಬಾಗೇಶ್ವರ, ಪಿಥೋರಗಢ ಮತ್ತು ಉದಮ್ಸಿಂಗ್ ನಗರ ಜಿಲ್ಲೆಗಳ ಒಂಬತ್ತು ಸಂತ್ರಸ್ತರ ವಿಚಾರಣೆ ವೇಳೆ ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಎಸ್ಟಿಎಫ್ ತಿಳಿಸಿದೆ.

ಮ್ಯಾನ್ಮಾರ್ನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಭಾರತದ ಹಲವು ರಾಜ್ಯಗಳ ಯುವಕರನ್ನು ಮರಳಿ ಕರೆತರಲಾಗಿದೆ. ಹಲವರನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದೆ.

‘ವ್ಯವಸ್ಥಿತ ಜಾಲದಲ್ಲಿನ ಭಾರತೀಯ ಏಜೆಂಟ್ಗಳು ಟೆಲಿಗ್ರಾಂ ಮತ್ತು ವಾಟ್ಸಾಪ್ನಂತಹ ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನು ಸಂಪರ್ಕಿಸುತ್ತಿದ್ದರು. ಬಳಿಕ ಅವರಿಂದ ಹಣಪಡೆದುಕೊಂಡು. ಥಾಯ್ ವೀಸಾದ ಮೂಲಕ ಬ್ಯಾಂಕಾಕ್ಗೆ ಕಳುಹಿಸುತ್ತಿದ್ದರು’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.