ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲ್ಕ್ಯಾರಾ ಸುರಂಗ ಕುಸಿತ: ಮನೆ ತಲುಪಿದ ಜಾರ್ಖಂಡ್‌, ಒಡಿಶಾ, ಅಸ್ಸಾಂ ಕಾರ್ಮಿಕರು

41 ಕಾರ್ಮಿಕರಲ್ಲಿ 21 ಕಾರ್ಮಿಕರು ನಿನ್ನೆ ಸಂಜೆ ತವರು ತಲುಪಿದರು
Published 2 ಡಿಸೆಂಬರ್ 2023, 5:17 IST
Last Updated 2 ಡಿಸೆಂಬರ್ 2023, 5:17 IST
ಅಕ್ಷರ ಗಾತ್ರ

ರಾಂಚಿ, ಭುವನೇಶ್ವರ್, ಗುವಾಹಟಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನ ಸಿಲುಕಿ ಹೊರ ಬಂದ 41 ಕಾರ್ಮಿಕರಲ್ಲಿ 21 ಕಾರ್ಮಿಕರು ನಿನ್ನೆ ಸಂಜೆ ತವರು ತಲುಪಿದರು.

ಜಾರ್ಖಂಡ್‌ನ 15 ಕಾರ್ಮಿಕರು ರಾಂಚಿ ವಿಮಾನ ನಿಲ್ದಾಣದ ಮೂಲಕ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಈ ವೇಳೆ ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಅವರು ಕಾರ್ಮಿಕರನ್ನು ಸ್ವಾಗತಿಸಿದರು.

ಕಾರ್ಮಿಕರನ್ನು ಸನ್ಮಾನಿಸಿದ ಸೋರೆನ್ ಅವರು, ಕಾರ್ಮಿಕರ ಧೈರ್ಯವನ್ನು ಕೊಂಡಾಡಿ ಅವರನ್ನು ಅವರ ಊರುಗಳಿಗೆ ಬಿಳ್ಕೊಟ್ಟರು. ಈ ವೇಳೆ ಕಾರ್ಮಿಕರ ಕುಟುಂಬದವರು ಹಾಜರಿದ್ದರು.

ಒಡಿಶಾದ ಐವರು ಕಾರ್ಮಿಕರಲ್ಲಿ ನಾಲ್ವರು ಭುವನೇಶ್ವರ್ ವಿಮಾನ ನಿಲ್ದಾಣದ ಮೂಲಕ ತಮ್ಮ ಮನೆಗಳಿಗೆ ತೆರಳಿದರು. ಈ ವೇಳೆ ಸಿಎಂ ನವೀನ್ ಪಟ್ನಾಯಿಕ್ ಅವರು ಕಾರ್ಮಿಕರನ್ನು ಸ್ವಾಗತಿಸಿ ತಲಾ ₹2 ಲಕ್ಷದ ಜೊತೆ ಬಿಳ್ಕೊಟ್ಟರು.

ಅಸ್ಸಾಂನ ಇಬ್ಬರು ಕಾರ್ಮಿಕರು ಗುವಾಹಟಿ ವಿಮಾನ ನಿಲ್ದಾಣದ ಮೂಲಕ ಮನೆಗಳಿಗೆ ತೆರಳಿದರು. ಈ ವೇಳೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು.

ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ಉತ್ತರಕಾಶಿಯ ಚಿನ್ಯಾಲಿಸೌರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಅವರನ್ನು ತವರಿಗೆ ಕಳುಹಿಸಲಾಯಿತು.

ಕೇಂದ್ರ ಸರ್ಕಾರದ ಚಾರ್‌ಧಾಮ್ ಸರ್ವಋತು ರಸ್ತೆ ಯೋಜನೆಯಡಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದಲ್ಲಿ ನಿರ್ಮಿಸುತ್ತಿರುವ ಸುರಂಗದ ಕೆಲಭಾಗಗಳು ನ.12 ರಂದು ಕುಸಿದು, 41 ಕಾರ್ಮಿಕರು ಸಿಲುಕಿಕೊಂಡಿದ್ದರು. ಅವರನ್ನು ಡಿ.28 ರಂದು ಸಂಜೆ ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆಸಿ ಹೊರತರಲಾಯಿಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT