ವಡೋದರ: ಊಟಕ್ಕಾಗಿ ಜಗಳ ನಡೆಯುವುದನ್ನು ನಾವು ಆಗಾಗ್ಗೆ ಕೇಳಿರುತ್ತೇವೆ. ಗುಜರಾತ್ನ ವಡೋದರದಲ್ಲಿ ಒಬ್ಬ ಮಹಿಳೆ ತಾನು ಕೊಟ್ಟ ಹಣಕ್ಕೆ ತಕ್ಕಷ್ಟು ಪಾನಿಪುರಿ ಕೊಟ್ಟಿಲ್ಲವೆಂದು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿದಾಡುತ್ತಿದೆ.

ನಡುರಸ್ತೆಯಲ್ಲಿ ಕುಳಿತಿರುವ ಮಹಿಳೆ. ಅಳುತ್ತಾ ನಾನು ಕೊಟ್ಟ ಹಣಕ್ಕೆ ಸರಿಯಾದಷ್ಟು ಪಾನಿಪುರಿ ನೀಡಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಹಿಳೆ ₹20 ಕೊಟ್ಟು ಒಂದು ಪ್ಲೇಟ್ ಪಾನಿಪುರಿ ಖರೀದಿಸಿದ್ದು, ಅಂಗಡಿಯಾತ 6 ಪಾನಿಪುರಿ ಕೊಡುವ ಬದಲು ಕೇವಲ 4 ಅನ್ನು ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಪಾನಿಪುರಿ ಮಾರುವವನ ಮೋಸದಿಂದ ಹತಾಶೆಗೊಂಡ ಮಹಿಳೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಬೈಕರ್ಗಳು ಈ ಮಹಿಳೆಯ ವಿಡಿಯೊ ಚಿತ್ರೀಕರಿಸಿದ್ದಾರೆ. ಬಳಿಕ, ಮಧ್ಯಪ್ರವೇಶಿಸಿದ ವಡೋದರ ಪೊಲೀಸರು ಸಮಸ್ಯೆ ಬಗೆಹರಿಸಿದ್ದಾರೆ ಎಂದು ಸಾಗರ್ ಪಟೋಲಿಯಾ ಎಂಬವರು ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಮಹಿಳೆ ಬಳಿ ಬಂದು ಪೊಲೀಸರು ಸಮಸ್ಯೆ ಬಗೆಹರಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಕೆಲವರು, ಆಕೆ ತಾನು ಕೊಟ್ಟಿರುವ ಹಣಕ್ಕೆ ಸೂಕ್ತವಾದ ಪಾನಿಪುರಿ ಪಡೆಯುವುದು ನ್ಯಾಯೋಚಿತವೇ ಎಂದರೆ, ಮತ್ತೆ ಕೆಲವರು ಇದೊಂದು ಸಿಲ್ಲಿ ಪ್ರತಿಭಟನೆ. ಪಾನಿಪುರಿಗಾಗಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುವುದೇ ಎಂದು ಹೇಳಿದ್ದಾರೆ.

'ಪಾನಿಪುರಿ ವಾಲಾ 20 ರೂಪಾಯಿಗೆ 6 ಪಾನಿಪುರಿ ಕೊಡುವ ಬದಲು ಕೇವಲ 4 ಅನ್ನು ಕೊಟ್ಟಿದ್ದಾರೆ. ಅದನ್ನು ವಿರೋಧಿಸಿ ಅವರು ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ರಾಹುಲ್ ಗಾಂಧಿಯವರ ವೋಟ್ ಚೋರಿ ಹೇಳಿಕೆಗಳಿಗಿಂತ ಜನರು ಪಾನಿಪುರಿಯ ಬಗ್ಗೆ ಹೆಚ್ಚು ಗಂಭೀರವಾಗಿರುತ್ತಾರೆ’ಎಂದು ಒಬ್ಬರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

‘ಪಾನಿ ಪುರಿ ಕೊಡದೇ ಅನ್ಯಾಯ ಮಾಡಿರುವುದು ನಗುವ ವಿಷಯವಲ್ಲ. ಈ ಘೋರ ನಿರ್ಲಕ್ಷ್ಯವನ್ನು ನೋಡಿ ನಗುತ್ತಿರುವ ಯಾರಿಗಾದರೂ ನಾಚಿಕೆಯಾಗಬೇಕು. ಪಾನಿಪುರಿ ಎಂದರೆ ಅದೊಂದು ಭಾವನಾತ್ಮಕ ವಿಷಯ, ಬಯಕೆ. ಸಂಪೂರ್ಣ ತೃಪ್ತಿಗಾಗಿ ಒಂದು ತಟ್ಟೆಯಲ್ಲಿ 6 ಪಾನಿಪುರಿ ಕೊಡಲೇಬೇಕು. ಅದಕ್ಕಿಂತ ಕಡಿಮೆ ಕೊಡುವುದನ್ನು ನಾನು ಬೆಂಬಲಿಸುವುದಿಲ್ಲ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.