ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪ್ರದಾಯ ಪಾಲಿಸಿದ ಕೊಹ್ಲಿ: ಟೀಂ ಇಂಡಿಯಾ ನಾಯಕನಿಂದ ಟ್ರೋಫಿ ಪಡೆದ ಭರತ್‌ ಯಾರು?

Last Updated 25 ನವೆಂಬರ್ 2019, 5:43 IST
ಅಕ್ಷರ ಗಾತ್ರ

ಕೋಲ್ಕತ್ತಾ: ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಸರಣಿಯನ್ನು ಗೆದ್ದ ಭಾರತ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರು ಟ್ರೋಫಿಯನ್ನು ತಂಡದ ಕಿರಿಯ ಆಟಗಾರ ಭರತ್‌ ಅವರಿಗೆ ನೀಡಿ ಕ್ಯಾಮೆರಾಗಳಿಗೆ ಫೋಜು ನೀಡಿದ್ದು, ಈ ಸರಣಿಯ ಮತ್ತೊಂದು ವಿಶೇಷ.

ಭರತ್‌ ಆಂಧ್ರ ಪ್ರದೇಶ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸುತ್ತಿದ್ದು, ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹ ಅವರ ಬದಲಿ ಆಟಗಾರನಾಗಿ ಈ ಸರಣಿಯಲ್ಲಿ ತಂಡ ಸೇರಿಕೊಂಡಿದ್ದರು. ಭರತ್‌ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ ಬದುಕಿನಲ್ಲಿ ಈ ವರೆಗೆ 69 ಪಂದ್ಯಗಳಲ್ಲಿ ಆಡಿದ್ದು, 3909 ರನ್‌ಗಳನ್ನು ತಮ್ಮ ಖಾತೆಯಲ್ಲಿಟ್ಟುಕೊಂಡಿದ್ದಾರೆ.

ಯಾಕಿದು ಸಂಪ್ರದಾಯ?

ಗೆದ್ದ ಸರಣಿಯ ಟ್ರೋಫಿಗಳನ್ನು ತಂಡದ ಅತಿ ಕಿರಿಯ ಆಟಗಾರರಿಗೆ ನೀಡುವ ಸಂಪ್ರದಾಯವನ್ನು ಹುಟ್ಟುಹಾಕಿದ್ದು ಮಹೇಂದ್ರ ಸಿಂಗ್‌ ಧೋನಿ. ಅವರು ಯಾವುದೇ ಸರಣಿಯಲ್ಲೂ ಟ್ರೋಫಿಯನ್ನು ತಾವೊಬ್ಬರೇ ಹಿಡಿದು ಕ್ಯಾಮೆರಾಗಳ ಮುಂದೆ ನಿಂತವರೇ ಅಲ್ಲ. ಸಂಭ್ರಮಾಚರಣೆಯ ವೇಳೆ ಟ್ರೋಫಿಯನ್ನು ಕಿರಿಯ ಆಟಗಾರನ ಕೈಗಿಟ್ಟು ಅವರು ಪಕ್ಕಕ್ಕೆ ನಿಲ್ಲುತ್ತಿದ್ದರು. ಯುವಕರನ್ನು ಪ್ರೋತ್ಸಾಹಿಸುವುದು, ಅವರನ್ನು ಹುರಿದುಂಬಿಸುವುದು ಅವರ ಈ ನಡೆಯ ಹಿಂದಿನ ಉದ್ದೇಶ.

ಈ ಕುರಿತು ಒಂದೊಮ್ಮೆ ಟಿ.ವಿ ಚಾನೆಲ್‌ವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಧೋನಿ, ‘ತಂಡದಲ್ಲಿ ಯಾರಾದರೂ ಕಿರಿಯರಿದ್ದರೆ, ಉತ್ತಮ ಆಟ ಪ್ರದರ್ಶಿಸಿದ್ದರೆ ಅವರಿಗೆ ನೀವು ಟ್ರೋಫಿಯನ್ನು ಹಸ್ತಾಂತರಿಸಿದರೆ ಅದು ಅವರನ್ನು ಪ್ರೋತ್ಸಾಹಿಸಿದಂತೆ. ಅದು ಒಬ್ಬ ಆಟಗಾರನಲ್ಲಿ ಅಪರಿಮಿತ ಆತ್ಮ ವಿಶ್ವಾಸ ತುಂಬುತ್ತದೆ. ಇಷ್ಟೇ ನನ್ನ ಉದ್ದೇಶ,’ ಎಂದು ಅವರು ಹೇಳಿಕೊಂಡಿದ್ದರು.

ಸದ್ಯ ವಿರಾಟ್‌ ಕೊಹ್ಲಿ ಅವರೂ ಧೋನಿಯವರನ್ನೇ ಅನುಸರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT