ಭಾರಿ ಮಳೆ ಕಾರಣ ಸರಣಿ ಭೂಕುಸಿತ ಕಂಡ ಚೂರಲ್‌ಮಲ ಗ್ರಾಮದ ಬುಧವಾರ ಕಂಡದ್ದು ಹೀಗೆ
–ಪಿಟಿಐ ಚಿತ್ರ
ಚೂರಲ್‌ಮಲ ಗ್ರಾಮದಲ್ಲಿ ರಭಸದಿಂದ ಹರಿಯುತ್ತಿರುವ ನದಿಯ ನಡುವೆ ರಕ್ಷಣಾ ಸಿಬ್ಬಂದಿಯು ಬಾಧಿತರನ್ನು ದಡ ತಲುಪಿಸಿದರು
–ಪಿಟಿಐ ಚಿತ್ರ
ಬಾಧಿತ ಗ್ರಾಮಗಳಿಂದ 5500ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. 8000 ಜನರಿಗೆ 82 ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ. 144 ಶವಗಳು ಪತ್ತೆಯಾಗಿದ್ದು 191ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಕೇರಳ
ಭೂಕುಸಿತ ಸಾಧ್ಯತೆ ಕುರಿತು ಕೇರಳ ಸರ್ಕಾರಕ್ಕೆ ಜುಲೈ 23ರ ನಂತರ ನಾಲ್ಕು ಬಾರಿ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ಆದರೆ ಕೇರಳ ಸರ್ಕಾರ ಮುನ್ನೆಚ್ಚರಿಕೆ ವಹಿಸಲಿಲ್ಲ. ಕೇಂದ್ರದ ಎಚ್ಚರಿಕೆಗೆ ಸ್ಪಂದಿಸಿದ್ದ ಇತರೆ ರಾಜ್ಯಗಳಲ್ಲಿ ಯಾವುದೇ ಅನಾಹುತವಾಗಿಲ್ಲ.
ಅಮಿತ್ ಶಾ ಕೇಂದ್ರ ಗೃಹ ಸಚಿವ
ಸಂಕಷ್ಟ ಕಾಲದಲ್ಲಿ ವಯನಾಡ್‌ನ ಜನತೆಗೆ ಎಲ್ಲ ಅಗತ್ಯ ನೆರವು ನೀಡಬೇಕು. ಭೂಕುಸಿತವು ಪರಿಸರಕ್ಕೆ ಸಂಬಂಧಿತ ವಿಷಯ. 5 ವರ್ಷದ ಬಳಿಕ ಮತ್ತೆ ಸಂಭವಿಸಿದೆ. ಭವಿಷ್ಯದಲ್ಲಿ ಇಂತಹದ್ದನ್ನು ತಡೆಯಲು ಹೈ–ಟೆಕ್ ಪರಿಹಾರಕ್ರಮಕ್ಕೆ ಕೇಂದ್ರ ಸರ್ಕಾರ ಒತ್ತು ನೀಡಬೇಕು.