ನವದೆಹಲಿ: ರೀಲ್ಸ್ ಮಾಡುವ ಸಲುವಾಗಿ ಐ–ಫೋನ್ 14 ಕೊಂಡುಕೊಳ್ಳಲು ದಂಪತಿಗಳು 8 ತಿಂಗಳ ಮಗುವನ್ನು ಮಾರಾಟ ಮಾಡಿದ ವಿಕ್ಷಿಪ್ತ ಘಟನೆ ಪಶ್ಚಿಮ ಬಂಗಾಳದಿಂದ ವರದಿಯಾಗಿದೆ. ರಾಜ್ಯದಾದ್ಯಂತ ಸುತ್ತಾಡಿ ರೀಲ್ಸ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದರು ಎಂದು ಗೊತ್ತಾಗಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಘಟನೆ ಸಂಬಂಧ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳಿಂದ ಮಗು ಕಾಣೆಯಾಗಿದ್ದು, ಈ ಬಗ್ಗೆ ಪೋಷಕರಲ್ಲಿ ಯಾವುದೇ ಆತಂಕ ಕಾಣಿಸಿದೇ ಇದ್ದಾಗ ಹಾಗೂ ಹಣಕಾಸಿನ ಸಮಸ್ಯೆ ಇದ್ದರೂ ಅವರ ಬಳಿ ಐಫೋನ್ 14 ಕಂಡಾಗ ನೆರೆಹೊರೆಯವರಿಗೆ ಅನುಮಾನ ಮೂಡಿತ್ತು.

ವಿಚಾರಣೆ ಬಳಿಕ ಮಗುವನ್ನು ಮಾರಾಟ ಮಾಡಿರುವ ವಿಷಯವನ್ನು ತಾಯಿ ಬಾಯಿ ಬಿಟ್ಟಿದ್ದಾಳೆ. ಅಲ್ಲದೇ ಈ ಹಿಂದೆ ಕೂಡ ಗಂಡ ಏಳು ವರ್ಷದ ಮಗಳನ್ನು ಮಾರಾಟಕ್ಕೆ ವಿಫಲ ಯತ್ನ ಮಾಡಿದ್ದನ್ನೂ ಹೇಳಿದ್ದಾಳೆ. ಪೊಲೀಸರು ಮಾನವ ಕಳ್ಳಸಾಗಾಣೆ ಪ್ರಕರಣ ದಾಖಲಿಸಿದ್ದಾರೆ. ವಿಸ್ಕೃತ ತನಿಖೆ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.