ಕೊಚ್ಚಿ: ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ಅಲುಗಾಡಿಸಿ, ಲಕ್ಷಾಂತರ ಜನರ ಸಾವಿಗೆ ಕಾರಣವಾದ ‘ಕೋವಿಡ್ 19‘, ಭಾರತದ ಪುಟ್ಟ ಹಾಗೂ ದ್ವೀಪಗಳ ಸಮೂಹದ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಮಾತ್ರ ಪ್ರವೇಶಿಸಿಲ್ಲ..!

ಇವತ್ತಿಗೂ ಈ ದ್ವೀಪದಲ್ಲಿ ಒಂದೇ ಒಂದು ‘ಕೋವಿಡ್ 19‘ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಇಲ್ಲಿನ ನಾಗರಿಕರು ಸೋಂಕಿನ ಭಯವಿಲ್ಲದೇ ಆರಾಮಾಗಿದ್ದಾರೆ. ಮಾಸ್ಕ್ ಧರಿಸುವುದಿಲ್ಲ, ಸ್ಯಾನಿಟೈಸರ್ ಬಳಸುವುದಿಲ್ಲ. ಅಷ್ಟೇ ಅಲ್ಲ, ಇಲ್ಲಿ ಕೋವಿಡ್ 19 ಸಾಂಕ್ರಾಮಿಕದ ಮಾರ್ಗಸೂಚಿ ನಿಯಮಗಳನ್ನೂ ಜಾರಿಗೊಳಿಸಿಲ್ಲ!

ದೇಶದಲ್ಲಿ ‘ಕೋವಿಡ್ 19‘ ವೈರಸ್ ಸೋಂಕು ಕಾಣಿಸಿಕೊಂಡ ದಿನದಿಂದಲೂ, ಲಕ್ಷದ್ವೀಪದಲ್ಲಿ ಯಾವ ಚಟುವಟಿಕೆಗಳೂ ನಿಂತಿಲ್ಲ. ಮದುವೆ ಸೇರಿದಂತೆ ಎಲ್ಲ ರೀತಿಯ ಸಾರ್ವಜನಿಕ ಸಮಾರಂಭಗಳು, ಜನ ಕೇಂದ್ರಿತ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ.

‘ಕೋವಿಡ್ 19‘ ನಿಯಮಗಳ ಅನುಸಾರ ಪ್ರವಾಸಿಗರು ಈ ದ್ವೀಪವನ್ನು ಪ್ರವೇಶಿಸುವ ಕಾರಣ, ಇಲ್ಲಿನ ಜನರೆಲ್ಲ ಇಷ್ಟು ಸುರಕ್ಷಿತವಾಗಿರಲು ಸಾಧ್ಯವಾಗಿದೆ. ‘ಕೋವಿಡ್ 19‘ ಮಾರ್ಗಸೂಚಿಗೆ ಒಂದು ಧನ್ಯವಾದ ಹೇಳಬೇಕು.

ಲಕ್ಷದ್ವೀಪ ಲೋಕಸಭಾ ಕ್ಷೇತ್ರದ ಸಂಸದ ಪಿ.ಪಿ.ಮೊಹ್ಮದ್ ಪ್ರಕಾರ, ‘ಈ ವರ್ಷದ ಆರಂಭದಿಂದಲೂ ಲಕ್ಷದ್ವೀಪದಲ್ಲಿ ಒಂದೇ ಒಂದು ಕೋವಿಡ್ ಪ್ರಕರಣಗಳು ದಾಖಲಾದ ವರದಿಯಾಗಿಲ್ಲ. ನಾವು ತೆಗೆದುಕೊಂಡು ಮುನ್ನೆಚ್ಚರಿಕೆ ಕ್ರಮಗಳಿಂದ ಇದು ಸಾಧ್ಯವಾಗಿದೆ‘ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.

‘ಯಾವುದೇ ವ್ಯಕ್ತಿ , ಅಧಿಕಾರಿ ಅಥವಾ ಜನಪ್ರತಿನಿಧಿಯಾಗಲಿ 36 ಚದರ ಕಿಲೋಮೀಟರ್ ವಿಸ್ತೀರ್ಣದ ಅರೇಬಿಯನ್ ಸಮುದ್ರದಲ್ಲಿರುವ ಲಕ್ಷದ್ವೀಪವನ್ನು ಪ್ರವೇಶಿಸಬೇಕಾದರೆ, ಕೊಚ್ಚಿಯಲ್ಲಿ ಕಡ್ಡಾಯವಾಗಿ ಏಳು ದಿನ ಕ್ವಾರಂಟೇನ್ ಸೇರಿದಂತೆ, ‘ಕೋವಿಡ್ 19‘ ಗಾಗಿ ವಿಧಿಸಿರುವ ಎಲ್ಲ ನಿಯಮಗಳನ್ನೂ ಪೂರ್ಣಗೊಳಿಸಿ, ನೆಗೆಟಿವ್ ವರದಿಯೊಂದಿಗೆ ಬರಬೇಕು. ಕೊಚ್ಚಿಯಿಂದ ಮಾತ್ರ ಈ ಕೇಂದ್ರಾಡಳಿತ ಪ್ರದೇಶಕ್ಕೆ ಹಡಗು ಮತ್ತು ಹೆಲಿಕಾಪ್ಟರ್ಗಳ ಮೂಲಕ ತಲುಪಲು ಸಾಧ್ಯವಿದೆ. ಹಾಗಾಗಿ, ಅಲ್ಲಿಯೇ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.

ಹೊರಗಿನಿಂದ ಬರುವವರಿಗೆ ಮಾತ್ರ ಕೋವಿಡ್ 19 ಮಾರ್ಗಸೂಚಿ, ನಿರ್ಬಂಧಗಳನ್ನು ವಿಧಿಸಲಾಗಿದೆ. ಆದರೆ ಲಕ್ಷದ್ವೀಪದ ನಾಗರಿಕರಿಗೆ ಈ ನಿಯಮಗಳಿಲ್ಲ. ಇಲ್ಲಿರುವವರು ಯಾರೂ ಮಾಸ್ಕ್ ಧರಿಸುವುದು ಕಡ್ಡಾಯವಿಲ್ಲ. ಸ್ಯಾನಿಟೈಸ್ ಉಪಯೋಗಿಸುವುದು ನಿಯಮವಲ್ಲ.

ಇದು ‘ಹಸಿರು ಪ್ರದೇಶ‘ವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 21 ರಿಂದ ಇಲ್ಲಿ ಶಾಲೆಗಳನ್ನು ತೆರೆದು, ತರಗತಿಗಳನ್ನು ನಡೆಸಲು ಅವಕಾಶ ನೀಡಿದ್ದಾರೆ. ಹೀಗಾಗಿ ದೇಶದಲ್ಲಿ ಶಾಲೆಗಳು ನಡೆಯುತ್ತಿರುವ ಏಕೈಕ ತಾಣ ಲಕ್ಷದ್ವೀಪ‘ ಎನ್ನುತ್ತಾರೆ ಫೈಜಾಲ್.

ದೇಶದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪ 32 ಸಣ್ಣ ಸಣ್ಣ ದ್ವೀಪಗಳನ್ನು ಒಳಗೊಂಡಿರುವ ದ್ವೀಪಸಮೂಹ ಕ್ಷೇತ್ರ. ಒಟ್ಟು 32 ಚ. ಕಿ.ಮೀ ಇದೆ. 2011ರ ಜನಗಣತಿ ಪ್ರಕಾರ 64ಸಾವಿರ ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದೆ.

ಕೇರಳದಲ್ಲಿ ದೇಶದ ಮೊದಲ ಕೋವಿಡ್ 19 ವೈರಸ್ ಸೋಂಕಿನ ಪ್ರಕರಣ ದಾಖಲಾಗುತ್ತಿದ್ದಂತೆ, ಇಲ್ಲಿನ ಆಡಳಿತ ಎಚ್ಚರಿಕೆ ತೆಗೆದುಕೊಂಡು, ತೀವ್ರ ನಿಗಾವಹಿಸಿತು. ಕಠಿಣ ನಿಯಮಗಳನ್ನು ರೂಪಿಸಿತು. ಮಾರ್ಚ್ ತಿಂಗಳಿನಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿತು. ನಂತರ ಮುಖ್ಯ ದ್ವೀಪದಿಂದ ಪ್ರತಿ ದ್ವೀಪಕ್ಕೆ ಪ್ರವೇಶಿಸುವವರ ಪರವಾನಗಿಯನ್ನು ನಿಲ್ಲಿಸಿತು. ಜತೆಗೆ ಕೊಚ್ಚಿ ಯಿಂದ ಲಕ್ಷದ್ವೀಪ ರಾಜಧಾನಿ ಕರವತಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಿತು‘ ಎಂದು ಫೈಜಾಲ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.