ಇಂದು (ಫೆಬ್ರುವರಿ 11)ದೂರದ ನ್ಯೂಜಿಲೆಂಡ್‌ನ ಮೌಂಟ್ ಮಾಂಗನೂಯಿಯಲ್ಲಿ ಆತಿಥೇಯಕಿವೀಸ್ ಹಾಗೂ ಭಾರತ ತಂಡದ ನಡುವಣ ಏಕದಿನ ಕ್ರಿಕೆಟ್ ಸರಣಿಯ ಫೈನಲ್ ಪಂದ್ಯ ನಡೆದಿದೆ. ಇತ್ತದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶವೂ ಪ್ರಕಟವಾಗಿದೆ.

ಅಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್‌ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಭರ್ಜರಿ ಶತಕ ಸಿಡಿಸಿದ್ದಾರೆ. ಅಚಾನಕ್ಕಾಗಿ ಸಿಕ್ಕ ವಿಕೆಟ್ ಕೀಪಿಂಗ್ ಅವಕಾಶವನ್ನೂ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.ಆದರೆ ಇಲ್ಲಿ, ರಾಹುಲ್ ಗಾಂಧಿ ತಮಗೆ ನೀಡಿದ್ದ ಅಧ್ಯಕ್ಷ ಸ್ಥಾನವನ್ನು 2019ರ ಲೋಕಸಭೆ ಚುನಾವಣೆ ಸೋಲಿನ ಬಳಿಕ ತ್ಯಜಿಸಿದ್ದಾರೆ.

ಅವರಕಾಂಗ್ರೆಸ್ ಪಕ್ಷ ಖಾತೆ ದೆಹಲಿ ಚುನಾವಣೆಯಲ್ಲಿ ಒಂದೂ ಸ್ಥಾನ ಗೆದ್ದಿಲ್ಲ.

ಹೀಗಾಗಿ ಇಬ್ಬರೂ ರಾಹುಲ್‌ಗಳನ್ನು (ಹೆಸರುಗಳನ್ನು)ಟ್ರೋಲ್ ಮಾಡಲು ಬಳಸಿಕೊಂಡಿರುವ ನೆಟ್ಟಿಗರು ಟ್ವಿಟರ್‌ನಲ್ಲಿ ಹಾಸ್ಯದ ಹೊಳೆ ಹರಿಸಿದ್ದಾರೆ.

ಮೂರನೇ ಏಕದಿನಪಂದ್ಯದಲ್ಲಿ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 296 ರನ್ ಕಲೆ ಹಾಕಿತ್ತು. ಈ ಮೊತ್ತ ಬೆನ್ನತ್ತಿದ ಕಿವೀಸ್ ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ 300 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 8 ಸ್ಥಾನ ಗಳಿಸಿಕೊಂಡಿದ್ದು, ಕಾಂಗ್ರೆಸ್ ಖಾತೆಯನ್ನೇ ತೆರೆಯಲಿಲ್ಲ.

ಟ್ವಿಟರ್‌ನಲ್ಲಿ ನಡೆದ ತಮಾಷೆಯ ಚರ್ಚೆ
ಪಟೇಲ್ ಮಿರಾಲ್ ಎನ್ನುವವರು, ‘ಕೆ.ಎಲ್.ರಾಹುಲ್ ಶತಕ ಬಾರಿಸಿದ್ದರೆ, ನಮ್ಮ ಯೂತ್ ಐಕಾನ್ ರಾಹುಲ್ ಗಾಂಧಿಯ ಮೊತ್ತ ಸೊನ್ನೆ.
ಹಾಗಾಗಿ, ಜೀವನದಲ್ಲಿ ನಿಮಗೆ ಅವಕಾಶ ಸಿಕ್ಕರೆ
ಅದನ್ನು ಕೆ.ಎಲ್.ರಾಹುಲ್ ರೀತಿ ಬಾಚಿಕೊಳ್ಳಿ. ರಾಹುಲ್ ಗಾಂಧಿಯಂತಲ್ಲ’ ಎಂದು ಕಿಚಾಯಿಸಿದ್ದಾರೆ.

ಅನ್ಷುಮಾನ್ ಎಂಬವರು, ‘ಬ್ರೇಕಿಂಗ್
ಮುಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಥಾನವನ್ನುಕೆ.ಎಲ್. ರಾಹುಲ್ ತುಂಬಲಿದ್ದಾರೆ’ ಎಂದು ಕಾಲೆಳೆದಿದ್ದಾರೆ.

ಇಂತಹ ಮತ್ತಷ್ಟು ಹಾಸ್ಯಭರಿತ ಟ್ವೀಟ್‌ಗಳು ಟ್ವಿಟರ್ ಪುಟಗಳಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.